LIVE TV LocalCrimeNationalInternationalPoliticsEducationTechnologyEntertainmentSportsFeature
State News

ಗೃಹಲಕ್ಷ್ಮಿ ಹಣ ಬಾರದಿದ್ದಲ್ಲಿ ಏನು ಮಾಡಬೇಕು ಗೊತ್ತಾ - ಅರ್ಜಿ ಸಲ್ಲಿಸಿದರು ಖಾತೆಗೆ ಹಣ ಬಾರದಿದ್ದರೆ ಹೀಗೆ ಮಾಡಿ.....

ಬೆಂಗಳೂರು -

ಗೃಹಲಕ್ಷ್ಮಿ ಹಣ ಬಾರದಿದ್ದಲ್ಲಿ ಏನು ಮಾಡಬೇಕು ಗೊತ್ತಾ - ಅರ್ಜಿ ಸಲ್ಲಿಸಿದರು ಖಾತೆಗೆ ಹಣ ಬಾರದಿದ್ದರೆ ಹೀಗೆ ಮಾಡಿ ಹೌದು ಲಕ್ಷಾಂತರ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದರೂ ಕೂಡಾ ಇದುವ ರೆಗೂ ಅಸಂಖ್ಯಾತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ.

1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ.ಆದರೆ ಯೋಜನೆ ಜಾರಿಯಾಗಿ ಒಂದು ವಾರ ಕಳೆದರೂ ಹಣ ಬಾರದ ಕಾರಣ ಮಹಿಳೆಯರು ಗೃಹಲಕ್ಷ್ಮಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.ಇಷ್ಟಕ್ಕೂ ಗೃಹಲಕ್ಷ್ಮೀಯ ಹಣ ಖಾತೆಗೆ ಬಾರದೇ ಇದ್ದ ಮಹಿಳೆಯರು ಏನು ಮಾಡ್ಬೇಕು? ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿಯೂ ನಿಮಗೆ ಹಣ ಬರುತ್ತಿಲ್ಲವಾದರೆ ಸರ್ಕಾರವೇ ನಿಮಗೊಂದು ಸಹಾಯವಾಣಿ ಸಂಖ್ಯೆಯನ್ನು ತಿಳಿಸಿದೆ.

ನಿಮ್ಮ ಪಡಿತರ ಚೀಟಿ, ಬ್ಯಾಂಕ್ ಅಕೌಂಟ್, ಆಧಾರ್ ನಂಬರ್ ಮಿಸ್ ಮ್ಯಾಚ್ ಆಗಿದ್ದಲ್ಲಿ ಇದರ ಮಾಹಿತಿಯನ್ನು ನೀಡಲು ಇಲಾಖೆ ಸಹಾಯವಾಣಿಯ ನಂಬರ್ ವೊಂದನ್ನು ನೀಡಿದೆ.ಅರ್ಜಿಯ ಸ್ಟೇಟಸ್ ಪರಿಶೀಲಿಸಲು ಈ ಸಹಾಯವಾಣಿ ನೆರವಾಗಲಿದೆ. 8147500500 ಈ ನಂಬರ್ ಗೆ ನಿಮ್ಮ ಆಧಾರ್ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. .

ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಂದೇಶ ಬರಲಿದೆ. ಆ ಮೂಲಕ ನೀವು ನಿಮಗೆ ಯಾವ ಕಾರಣಕ್ಕಾಗಿ ಹಣ ಬರುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಬಹು ದಾಗಿದೆ.ಅಲ್ಲದೆ ಅದನ್ನು ಸರಿಪಡಿಸಿಕೊಳ್ಳಬಹು ದಾಗಿದೆ. ನಿಮ್ಮ ಎಲ್ಲಾ ಪ್ರಶ್ನೆಗೂ ಈ ನಂಬರ್ ಮೆಸೆಜ್ ನಲ್ಲಿ ಮಾಹಿತಿ ಸಿಗಲಿದೆ.

ನಿಮ್ಮ ಅರ್ಜಿ ಅಸ್ವೀಕೃತವಾಗಿದ್ದರೇ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಮಾಹಿತಿ ಬರಲಿದೆ. ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಹೆಸರನ್ನು ತಿದ್ದುಪಡಿ ಮಾಡಿಸಲು ಸಪ್ಟೆಂಬರ್ 1 ರಿಂದ 10 ರವರೆಗೆ ಅವಕಾಶ ನೀಡಲಾಗಿತ್ತು. ಈಗ ಅವಧಿಯನ್ನು ಸಪ್ಟೆಂಬರ್ 14 ರವರೆಗೆ ವಿಸ್ತರಿಸ ಲಾಗಿದೆ.ರಾಜ್ಯದಲ್ಲಿ ಒಟ್ಟು 1.28 ಫಲಾನುವಿಗಳಿ ದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಪೈಕಿ 1.11 ಕೋಟಿ ಮಹಿಳೆಯರು ಮಾತ್ರ ನೋಂದಣಿಯನ್ನು ಮಾಡಿಸಿ ಕೊಂಡಿದ್ದಾರೆ. ಹೀಗಾಗಿ ಸರ್ಕಾರ ಗೃಹಲಕ್ಷ್ಮೀ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....