ನವದೆಹಲಿ -
ಸರ್ಕಾರಿ ನೌಕರರಿಗೆ ಡಿಎ ಅನ್ನು ಹೇಗೆ ನಿರ್ಧಾರ ಮಾಡುತ್ತಾರೆ ಎಂಬ ಕುರಿತು ನೊಡೊದಾದರೆ ಎಐಸಿಪಿಐ-ಐಡಬ್ಲ್ಯು ದತ್ತಾಂಶವು ತುಟ್ಟಿಭತ್ಯೆಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಈ ದತ್ತಾಂಶವು ದಿನನಿತ್ಯದ ವಸ್ತುಗಳ ಬೆಲೆಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ. ಇದರ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ
ಜನವರಿ 2026ರಲ್ಲಿ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಯನ್ನು ಶೇಕಡಾ 58ರಿಂದ 60ಕ್ಕೆ ಹೆಚ್ಚಿಸಿತ್ತು ಈ ನಿರ್ಧಾರವನ್ನು ಏಪ್ರಿಲ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಪ್ರಯೋಜನಗಳು ಜನವರಿ 1, 2026ರಿಂದಲೇ ಪ್ರಾರಂಭವಾಗಿದ್ದವು. ಈಗ ಜುಲೈ 2026ರ ಹೊಸ ತುಟ್ಟಿಭತ್ಯೆಯನ್ನು ನಿರೀಕ್ಷಿಸಲಾಗುತ್ತಿದೆ ಸರ್ಕಾರದ ಅಧಿಕೃತ ಘೋಷಣೆಯ ನಂತರವೇ ಅಂತಿಮ ಶೇಕಡಾವಾರು ಪ್ರಮಾಣವನ್ನು ಅಂತಿಮಗೊಳಿಸಲಾ ಗುತ್ತದೆ.
ಪ್ರಸ್ತುತ ದತ್ತಾಂಶದ ಆಧಾರದ ಮೇಲೆ ಜುಲೈ 2026 ರಿಂದ ಡಿಎಯಲ್ಲಿ ಶೇಕಡಾ 3ರಿಂದ 4ರಷ್ಟು ಹೆಚ್ಚಳ ವಾಗುವ ನಿರೀಕ್ಷೆಯಿದೆ ಶೇಕಡಾ 3ರಷ್ಟು ಹೆಚ್ಚಳ ವಾದರೆ ಡಿಎ ಶೇಕಡಾ 60ರಿಂದ 63ಕ್ಕೆ ಏರುತ್ತದೆ. ಶೇಕಡಾ 4ರಷ್ಟು ಹೆಚ್ಚಳವಾದರೆ ಅದು ಶೇಕಡಾ 64ಕ್ಕೆ ತಲುಪಬಹುದು ಆದಾಗ್ಯೂ ಸರ್ಕಾರವು ಈ ವಿಷಯದ ಬಗ್ಗೆ ಇನ್ನೂ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಉದಾಹರಣೆಗೆ ಒಬ್ಬ ಉದ್ಯೋಗಿಯ ಮೂಲ ವೇತನ 50,000 ರೂಪಾಯಿ ಆಗಿದ್ದರೆ, ಶೇಕಡಾ 60 ಡಿಎ ಯಲ್ಲಿ ಅವರು 30,000 ರೂಪಾಯಿ ಪಡೆಯುತ್ತಾರೆ. ಶೇಕಡಾ 63ರಲ್ಲಿ ಇದು 31,500 ರೂಪಾಯಿಗೆ ಹೆಚ್ಚಾ ಗುತ್ತದೆ. ಶೇಕಡಾ 64ರಲ್ಲಿ 32,000 ರೂಪಾಯಿಗೆ ಏರುತ್ತದೆ. ನಿಜವಾದ ವೇತನ ಬದಲಾವಣೆಯು ಇತರ ಭತ್ಯೆಗಳು ಮತ್ತು ನಿಯಮಗಳನ್ನು ಅವಲಂಬಿಸಿರುತ್ತದೆ
ಸುದ್ದಿ ಸಂತೆ ನ್ಯೂಸ್ ನವದೆಹಲಿ.....