LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನದ ಮಾಹಿತಿ.....

ಹುಬ್ಬಳ್ಳಿ ಧಾರವಾಡ -

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗೆ ಶೇ.53.81 ರಷ್ಟು ಮತದಾನ - ಜಿಲ್ಲಾಧಿಕಾರಿ ನಿತೇಶ ಪಾಟೀಲ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿ ಯುತವಾಗಿ ಮತದಾನ ಜರುಗಿತು.ಒಟ್ಟು8,18,096 ಮತದಾರರ ಪೈಕಿ 4,40,251 ಮತದಾರರು ಮತ ಚಲಾಯಿಸಿದ್ದು,ಶೇ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿ ಕಾರಿ ನಿತೇಶ ಕೆ. ಪಾಟೀಲ ಅವರು ತಿಳಿಸಿದ್ದಾರೆ.

82 ವಾರ್ಡ್ ಗಳಲ್ಲಿ ಒಟ್ಟು 842 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.ಅದರಲ್ಲಿ 292 ಸೂಕ್ಷ್ಮ, 93 ಅತೀ ಸೂಕ್ಷ್ಮ ಮತ್ತು 457 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು,ಎಲ್ಲ ಮತಗಟ್ಟೆಗಳಲ್ಲಿಯೂ ಶಾಂತಿ ಯುತವಾಗಿ ಮತದಾನವಾಗಿದೆ ಎಂದರು.

ಇನ್ನೂ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಮತದಾನ ದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ವಾಗಿದೆ.2013ರ ಮಾರ್ಚ್ 7 ರಂದು ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ ಶೇ.66ರಷ್ಟು ಮತದಾನ ದಾಖಲಾಗಿತ್ತು.ಆಗ 67ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು

ಇನ್ನೂ ಪ್ರಮುಖವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟು ಪಾಲಿಕೆಗೆ ಚುನಾವಣೆ ನಡೆಯಿತು ಮತದಾನದ ವಿವರ ಈ ಕೆಳಗಿನಂತೆ ಇದೆ

ವಾರ್ಡ್‍ವಾರು ಮತದಾನದ ವಿವರ


ಈ ಬಾರಿ 82ವಾರ್ಡ್ ಗಳಿಗೆ ಮತದಾನ ನಡೆದ್ರೂ ಆಗಿದ್ದು ಮಾತ್ರ ಶೇ. 53.81ರಷ್ಟು ಮತದಾನ ವಾಗಿದೆ.ಮತದಾನ ಪ್ರಮಾಣದಲ್ಲಿ ಶೇ.12.19 ರಷ್ಟು ಕುಸಿತವಾಗಿದೆ‌.ಮತದಾನಕ್ಕೆ ರಜೆ ನೀಡಿದರು ಕೂಡಾ ದೂರುಳಿದ ಹು-ಧಾ ನಗರದ ಹಲವು ಮಂದಿ ಎಂಬೊಂದು ಇದರಿಂದ ಗೊತ್ತಾಗಿದೆ.

ಮತಾದಾನ ಪ್ರಮಾಣಕ್ಕೆ ಕೋವಿಡ್,ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣ.ಮುಂಬರುವ ವಿಧಾನಸಭೆ,ಲೋಕಸಭೆ ಚುನಾವಣೆಗೆ ನಿರ್ಣಾ ಯಕವಾಗಲಿರುವ ಪಾಲಿಕೆ ಮತದಾನದ ಶೇಕಡಾ ವಾರು ಪ್ರಮಾಣ.ಮತದಾನದಿಂದ ದೂರವುಳಿದು ಸರ್ಕಾರಕ್ಕೆ, ಜನ ಪ್ರತಿನಿಧಿಗಳಿಗೆ ತಕ್ಕ ಉತ್ತರ ಕೊಟ್ಟ ಹು-ಧಾ ಮಂದಿ ಎಂಬ ಮಾತುಗಳು ಗಲ್ಲಿ ಗಲ್ಲಿಯಲ್ಲಿ ಕೇಳಿ ಬರುತ್ತಿವೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......