ಬೆಂಗಳೂರು -
ಶಿಕ್ಷಕರ ವರ್ಗಾವಣೆ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು ಇಲಾಖೆ ಈ ಒಂದು ಕುರಿತು ಅಧಿಕೃತ ವಾಗಿ ಮಾಹಿತಿಯನ್ನು ನೀಡಿದೆ ಹೌದು ಬ್ಲಾಕ್ ಖಾಲಿ ಹುದ್ದೆಗಳ ಶೇಕಡಾವಾರು ನಿಯಮದಿಂದ ವಿನಾಯಿತಿಯನ್ನು ನೀಡಲಾಗಿದೆ 2026ರ ತಿದ್ದುಪಡಿ ನಿಯಮಗಳ ಕರಡು ಅಧಿಸೂ ಚನೆ ಪ್ರಕಟ ಮಾಡಲಾಗಿದೆ
ರಾಜ್ಯದ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹತ್ವದ ಹೊಸ ನಿಯಮಗಳನ್ನು ರೂಪಿಸಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) ನಿಯಮಗಳು–2026ರ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಹೊಸ ಕರಡು ನಿಯಮಗಳ ಪ್ರಕಾರ ಈ ಹಿಂದೆ ಸಮರ್ಪಕ ಮರುಹೊಂದಾಣಿಕೆಯ ಹೆಚ್ಚುವರಿ ಪ್ರಕ್ರಿಯೆಯಲ್ಲಿ ವಲಯ ವರ್ಗಾವಣೆ ಅಥವಾ ಬಡ್ತಿಯ ಆಧಾರದ ಮೇಲೆ ವರ್ಗಾವಣೆಗೊಂಡ ಶಿಕ್ಷಕರಿಗೆ ಮಹತ್ವದ ವಿನಾಯಿತಿ ನೀಡಲಾಗಿದೆ.
ಅದರಂತೆ ಇಂತಹ ವರ್ಗಾವಣೆಯಿಂದಾಗಿ ಅದೇ ಜಿಲ್ಲೆಯೊಳಗೆ ಶಿಕ್ಷಕರ ಕಾರ್ಯನಿರತ ಶೈಕ್ಷಣಿಕ ಬ್ಲಾಕ್ ಬದಲಾವಣೆಯಾಗಿದ್ದರೆ, ಮುಂದಿನ ವರ್ಗಾವಣೆಗೆ ಬ್ಲಾಕ್‌ನಲ್ಲಿರುವ ಖಾಲಿ ಹುದ್ದೆಗಳ ಶೇಕಡಾವಾರು ಪ್ರಮಾಣದ ನಿಯಮವನ್ನು ಅನ್ವಯಿಸದೆ ವರ್ಗಾವ ಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ನಿಯಮಗಳಿಂದಾಗಿ ಮರುಹೊಂದಾಣಿಕೆ, ವಲಯ ವರ್ಗಾವಣೆ ಅಥವಾ ಬಡ್ತಿಯ ಕಾರಣದಿಂದ ಬ್ಲಾಕ್ ಬದಲಾದ ಶಿಕ್ಷಕರಿಗೆ ವರ್ಗಾವಣೆ ಸಂದರ್ಭದಲ್ಲಿ ಎದುರಾಗುತ್ತಿದ್ದ ಕೆಲವು ತಾಂತ್ರಿಕ ತೊಂದರೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.ಇನ್ನು ಈ ಕರಡು ಅಧಿಸೂಚನೆಯ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ಅವಧಿ ನೀಡಲಾಗಿದೆ. ಸಾರ್ವಜನಿಕರಿಂದ ಸ್ವೀಕರಿಸುವ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಅಂತಿಮ ನಿಯಮಗಳನ್ನು ಪ್ರಕಟಿಸಲಿದೆ.
ಒಟ್ಟಾರೆ, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿದ್ದು 2026ರ ತಿದ್ದುಪಡಿ ಕರಡು ನಿಯಮಗಳು ಶಿಕ್ಷಕರ ವಲಯದಲ್ಲಿ ಕುತೂಹಲ ಮೂಡಿಸಿವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....