ಮಧುಗಿರಿ -
ಪಟ್ಟಣದ ಕಾರಮರಡಿ ಗುಟ್ಟೆಯಲ್ಲಿ ಮಧ್ಯಾಹ್ನ ಚಿರತೆ ಪ್ರತ್ಯಕ್ಷವಾಗಿದೆ.ಚಿರತೆ ಕಾಣಿಸಿಕೊಂಡ ಗುಟ್ಟೆ ತಪ್ಪಲಿನಲ್ಲಿ ಶನಿ ಮಹಾತ್ಮ ದೇವಾಲಯ,ಮಂಡರಗುಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿವೇಕಾನಂದ ಶಾಲೆ, ಪದವಿ ವಿದ್ಯಾರ್ಥಿಗಳ ಹಾಸ್ಟೆಲ್ ಸೇರಿದಂತೆ ಹತ್ತಾರು ಕುಟುಂಬ ವಾಸವಿವೆ.
ಮಂಡರಗುಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 15 ವಿದ್ಯಾರ್ಥಿಗಳಿದ್ದು, ಶಾಲೆ ಸಮೀಪವೇ ಚಿರತೆ ಕಾಣಿಸಿ ಕೊಂಡಿರುವುದು ಆತಂಕ ಹೆಚ್ಚಿಸಿದೆ.ಮತ್ತೆ ಮತ್ತೆ ಪ್ರತ್ಯಕ್ಷ ಕಾರಮರಡಿ ಗುಟ್ಟೆಯಲ್ಲಿ ಚಿರತೆಗಳು ಕಾಣಿಸಿಕೊಂ ಡಿವೆ ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಮಧುಗಿರಿ.....