ಕೋಲಾರ -
ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ, ವಿದ್ಯಾರ್ಥಿಗಳ ಪರದಾಟ ಇಂತಹ ದೊಂದು ಘಟನೆ ಕೋಲಾರ ನಗರದ ಜೂನಿಯರ್ ಕಾಲೇಜುಮೈದಾನ ದಲ್ಲಿ ಕಂಡು ಬಂದಿತು ಹೋಬಳಿ ಮಟ್ಟದ ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು.
ದೂರದ ಹಳ್ಳಿಗಳಿಂದ ಸುಮಾರು 800 ವಿದ್ಯಾರ್ಥಿ ಗಳು ಬಂದಿದ್ದು ಕುಡಿಯುವ ನೀರು ಸೇರಿದಂತೆ ಕೆಲ ಮೂಲಸೌಕರ್ಯ ವ್ಯವಸ್ಥೆ ಇರಲಿಲ್ಲ.ಈ ಮೈದಾನದಲ್ಲಿ ನಗರಸಭೆಯಿಂದ ಗಣೇಶನ ಮೂರ್ತಿಗಳನ್ನು ಇಟ್ಟು ಮಾರಲು ಅನುಮತಿ ನೀಡಲಾಗಿದೆ ಹೀಗಾಗಿ, ಮೈದಾನದ ಮಧ್ಯ ಭಾಗದಲ್ಲೇ ಮಾರಾಟವೂ ನಡೆಯುತ್ತಿದೆ. ಅದರ ಪಕ್ಕದಲ್ಲೇ ವಾಲಿವಾಲ್, ಕಬಡ್ಡಿ, ಕೊಕ್ಕೊ, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.ಬಿಸಿಲ ಧಗೆ ಹೆಚ್ಚಿದ್ದು, ಮಕ್ಕಳು ಕುಳಿತುಕೊಳ್ಳಲು ಶಾಮಿಯಾನವನ್ನೂ ಹಾಕಿರಲಿಲ್ಲ, ಕುರ್ಚಿಗಳಂತೂ ಮೊದಲೇ ಇರಲಿಲ್ಲ. ಮರದ ನೆರಳಿನ ಮೊರೆ ಹೋದ ವಿದ್ಯಾರ್ಥಿಗಳು ಕುಡಿಯುವ ನೀರಿ ಗಾಗಿ ಪರದಾಡುತ್ತಿದ್ದದ್ದು ಕಂಡುಬಂತು. ಪ್ರಥಮ ಚಿಕಿತ್ಸೆ ಕಿಟ್ ಇತ್ತಾದರೂ ನರ್ಸ್ ನಿಯೋಜಿಸಿರಲಿಲ್ಲ
ಈ ಬಗ್ಗೆ ಕ್ರೀಡಾಕೂಟದ ಸಂಘಟಕರನ್ನು ಕೇಳಿದರೆ, 'ಶಾಮಿಯಾನ, ಕುರ್ಚಿ ತರಿಸಲು ಅನುದಾನದ ಕೊರತೆ ಇದೆ. ಇರುವ ಹಣದಲ್ಲೇ ಕ್ರೀಡಾಕೂಟ ನಡೆಸಬೇಕು. ಸುಮಾರು 800 ವಿದ್ಯಾರ್ಥಿಗಳು ಬಂದಿದ್ದು, ಮಾಧ್ಯಮದವರಿಂದ ಮಾಹಿತಿ ಗೊತ್ತಾದ ಮೇಲೆ ಕುಡಿಯುವ ನೀರು ವ್ಯವಸ್ಥೆ ಮಾಡಿದೆವು. ದಾನಿಗಳಿಂದ ಊಟ ವ್ಯವಸ್ಥೆ ಮಾಡಿದ್ದು, ಪದಕ ಹಾಗೂ ಪ್ರಮಾಣಪತ್ರವನ್ನು ಇಲಾಖೆಯಿಂದ ನೀಡಿದೆವು. ಮುಂದೆ ಕ್ರೀಡಾಕೂಟ ನಡೆಸುವಾಗ ನರ್ಸ್ ನಿಯೋಜನೆ ಮಾಡುತ್ತೇವೆ' ಎಂದು ಹೇಳಿದರು.
ಕ್ರೀಡಾ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, 'ಹೋಬಳಿ ಮಟ್ಟದ ಕ್ರೀಡಾಕೂಟ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಶಾಲಾ ಶಿಕ್ಷಣ ಇಲಾಖೆಯಿಂದಲೇ ನಡೆಸುತ್ತಾರೆ' ಎಂದು ಉತ್ತರಿಸಿದರು.ಈ ಕ್ರೀಡಾ ಕೂಟದಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗಿನ ಮಕ್ಕಳು ಪಾಲ್ಗೊಂಡಿದ್ದು, 14 ಹಾಗೂ 17 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಇಲ್ಲಿ ಗೆದ್ದ ಮಕ್ಕಳು ತಾಲ್ಲೂಕು ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೋಲಾರ.....