ಕುಷ್ಟಗಿ -
ಬಿಇಒ ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ನಡೆದ ಘಟನೆ ಕುಷ್ಟಗಿ ಯಲ್ಲಿ ನಡೆದಿದೆ.ಹೌದು ಮಾನ್ಯತೆ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಯಾವುದು ಎಂಬ ವಿಷಯದಲ್ಲಿ ವಿವಾದ ಉಂಟಾ ಗಿದ್ದು ಈ ವಿಚಾರವನ್ನು ಪ್ರತಿಷ್ಠೆ ಮಾಡಿಕೊಂಡಿರುವ ತಾಲ್ಲೂಕಿನ ಶಿಕ್ಷಕರ ಎರಡು ಗುಂಪುಗಳು ಕ್ಷೇತ್ರ ಶಿಕ್ಷಣಾಧಿಕಾರಿ ಎದುರಿನಲ್ಲೇ ಕಿತ್ತಾಡಿಕೊಂಡಿರುವ ಘಟನೆ ಬಿಇಒ ಕಚೇರಿಯಲ್ಲಿ ನಡೆದಿದೆ.ತಮ್ಮದೇ ಅಧಿಕೃತ ಶಿಕ್ಷಕರ ಸಂಘ ಎಂದು ಹೇಳಿಕೊಂಡಿರುವ ಚಂದ್ರಶೇಖರ ನುಗ್ಲಿ ಹಾಗೂ ಸುಮತಿ ಎಂಬ ಅಧ್ಯಕ್ಷ ರುಗಳ ಎರಡು ಗುಂಪುಗಳ ಸಂಘಗಳು ಇಲ್ಲಿವೆ.
ರಾಜಕೀಯ ಪ್ರಭಾವವನ್ನೂ ಹೊಂದಿರುವ ಕೆಲ ಶಿಕ್ಷಕರು ಶಿಕ್ಷಣಾಧಿಕಾರಿ ಮುಂದೆಯೇ ಪರಸ್ಪರ ಏಕ ವಚನದಲ್ಲಿ ವಾಗ್ವಾದಕ್ಕಿಳಿದಾಗ ಪರಿಸ್ಥಿತಿ ಕೈಕೈ ಮಿಲಾ ಯಿಸುವ ಹಂತಕ್ಕೆ ಹೋಗಿತ್ತು. ಶಿಕ್ಷಣಾಧಿಕಾರಿ ಮತ್ತು ಕೆಲ ಶಿಕ್ಷಕರು ಅಂಥ ಪ್ರಸಂಗವನ್ನು ತಪ್ಪಿಸಿದ್ದಾರೆ
ತಾಲ್ಲೂಕು ಮಟ್ಟದಲ್ಲಿ ನಡೆಯುವ ಶಿಕ್ಷಕರ ದಿನಾಚ ರಣೆಗೆ ಸಂಬಂಧಿಸಿದಂತೆ ಬಿಇಒ ಉಮಾದೇವಿ ಬಸಾಪುರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತೆ ಸಭೆ ನಡೆಸಲಾಗಿತ್ತು. ದಿನಾಚರಣೆಯಲ್ಲಿನ ಜವಾಬ್ದಾರಿ ವಹಿಸುವುದಕ್ಕೆ ಹಣಕಾಸು, ಆಹಾರ, ವೇದಿಕೆ ಹೀಗೆ ವಿವಿಧ ಸಮಿತಿಗಳಿಗೆ ಅಧ್ಯಕ್ಷರನ್ನಾಗಿಸುವ ವಿಚಾರ ಪ್ರಸ್ತಾಪಕ್ಕೆ ಬಂದಿದೆ. ಹಿಂದಿನ ವಾಡಿಕೆಯಂತೆ ಹಣಕಾಸು ಸಮಿತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೀರಪ್ಪ ಕುರಿ ಅವರನ್ನು ನೇಮಿಸು ವುದನ್ನು ವಿರೋಧಿಸಿದ ಕೆಲವರು ಬೇರೆ ಹೆಸರನ್ನು ಸೂಚಿಸಿದರು.
ಆದರೆ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರನ್ನೇ ಹಣಕಾಸು ಸಮಿತಿ ಅಧ್ಯಕ್ಷರನ್ನಾಗಿಸುವ ಪರಂಪರೆ ಇತ್ತು, ಈ ಬಾರಿ ಬದಲಿಸುವುದು ಸೂಕ್ತ ಅಲ್ಲ ಎಂದು ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿ ಸಿದರು
ಈ ವಿಷಯದ ಚರ್ಚೆಯಲ್ಲಿ ಪರ ವಿರೋಧ ವ್ಯಕ್ತ ವಾದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಅನಿವಾರ್ಯವಾಗಿ ಪೂರ್ವಭಾವಿ ಸಭೆಯನ್ನೇ ಮುಂದೂಡಿದ್ದರು. ನಂತರ ದಿನದಲ್ಲಿ ಪುನಃ ಪೂರ್ವಭಾವಿ ಸಭೆ ನಡೆದಿದ್ದು ಎರಡೂ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ದ್ದರು ಆದರೆ ಸಮಿತಿಗಳಿಗೆ ಅಧ್ಯಕ್ಷರನ್ನಾಗಿಸುವ ಪರಿಪಾಠ ಕೈಬಿಡಲಾಗಿದೆ ಎನ್ನಲಾಗಿದೆ.'ನಮ್ಮಲ್ಲಿನ (ಶಿಕ್ಷಕರ) ಸಮನ್ವಯದ ಕೊರತೆ ಶಿಕ್ಷಕರ ದಿನಾಚರ ಣೆಯ ಮೇಲೆ ಅಡ್ಡಪರಿಣಾಮ ಬೀರುವಂತಾಗಿದೆ.
ಅನೇಕ ಶಿಕ್ಷಕರು ಪರೋಕ್ಷವಾಗಿ ಒಂದೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿ ಕೊಂಡು ಶಿಕ್ಷಣ ಇಲಾಖೆಯನ್ನು ತಮ್ಮ ಅಣತಿಯಂತೆ ನಡೆಸಿಕೊಳ್ಳುತ್ತಿ ದ್ದು ಅಲರ್ಜಿ ಎನ್ನುವಂತಾ ಗಿದೆ ಬುದ್ಧಿ ಹೇಳಬೇಕಾದ ರಾಜಕೀಯ ನಾಯಕರೂ ಶಿಕ್ಷಕರ ಬೆನ್ನಿಗೆ ನಿಂತಿರು ವುದೂ ಸ್ಪಷ್ಟವಾಗಿದೆ ಎನ್ನುವ ಮಾತು ಗಳು ಶಿಕ್ಷಕ ರಿಂದ ಕೇಳಿ ಬಂದವು
ಚಂದ್ರಶೇಖರ ನುಗ್ಗಲಿಯವರ ಬಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಂದು ಹೇಳಿಕೊಂಡಿದ್ದರೂ ತಾಲ್ಲೂಕು ಘಟಕದಲ್ಲಿ ಚುನಾವ ಣೆಯೇ ನಡೆದಿಲ್ಲ. ಆದರೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಮಾನ್ಯತೆಗೆ ಪ್ರತಿಪಾದಿಸುತ್ತಿ ರುವುದು ಸರಿಯಲ್ಲ ಎಂಬ ಮಾತುಗಳ ನಡುವೆ ಇದಕ್ಕೆ ಪರ್ಯಾಯವಾಗಿ ಮತ್ತೊಂದು ಸಂಘ ರಚನೆಯಾಗಿದೆ.
ಹಾಗಾಗಿ ಇಲಾಖೆಯ ಸಭೆ, ಸಮಾರಂಭಗಳಿಗೆ ಅಧಿಕೃತವಾಗಿ ಆಹ್ವಾನಿಸಬೇಕು ಎಂದು ಬಿಇಒ ಅವರಿಗೆ ಮನವಿ ಸಲ್ಲಿಸಿದ್ದೇವೆ' ಎಂದು ಸುಮತಿ ಬಣದ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಅಮರಾವತಿ ಹೇಳಿದ್ದಾರೆ
'ನುಗ್ಲಿ ಅವರದ್ದೇ ಮಾನ್ಯತೆ ಪಡೆದ ಸಂಘವಾಗಿದೆ. ಆದರೆ ರಾಜ್ಯ ಘಟಕದಲ್ಲಿ ಸುಮತಿ ಎಂಬುವವರು ತಾವೇ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಸಂಘದ ಹೆಸರು ಮತ್ತು ಲಾಂಛನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಚಂದ್ರಶೇಖರ ನುಗ್ಲಿ ಅವರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯಾವ ತಾಲ್ಲೂಕಿನಲ್ಲೂ ಇರದ ಘಟಕ ಈ ತಾಲ್ಲೂಕಿನಲ್ಲಿ ಮಾತ್ರ ಇದೆ' ಎಂದು ನುಗ್ಲಿ ಬಣದ ಸಂಘದ ಅಧ್ಯಕ್ಷ ಬೀರಪ್ಪ ಕುರಿ ವಿವರಿಸಿದರು.
ಸಭೆಯಲ್ಲಿ ಮಾತಿನ ಚಕಮಕಿ ನಡೆದಿದ್ದು ನಿಜ, ಶಿಕ್ಷಕರ ಎರಡು ಸಂಘಗಳು ಅಸ್ತಿತ್ವ ಹೊಂದಿರುವುದಾಗಿ ಪ್ರತಿ ಪಾದಿಸುತ್ತಿವೆ. ಆದರೆ ಸರ್ಕಾರ ಮಾನ್ಯತೆ ಪಡೆದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಲಿ ಅವರಿಗೆ ಸೇರಿದ ನೋಂದಾಯಿತ ಸಂಘವನ್ನು ಮಾತ್ರ ಇಲಾಖೆ ಪರಿಗಣಿಸಿದೆ
ಸುದ್ದಿ ಸಂತೆ ನ್ಯೂಸ್ ಕುಷ್ಟಗಿ.....