ಬೆಂಗಳೂರು -
ರಾಜ್ಯದ ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಖಾಸಗಿ ಶಾಲಾ ಮಕ್ಕಳಂತೆಯೇ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಹೊಸ ಚಿಂತನೆ ಮತ್ತು ಆಕರ್ಷಕ ವಿನ್ಯಾಸದ ಸಮವಸ್ತ್ರ ನೀಡುವಂತೆ ಶಿಕ್ಷಣ ಇಲಾಖೆಗೆ ಸಲಹೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಹೇಳಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಬದಲಾವಣೆಯ ಸುಳಿವು ನೀಡಿದರು
ಪ್ರಾಥಮಿಕ ಶಿಕ್ಷಣವು ಇಡೀ ಶಿಕ್ಷಣ ವ್ಯವಸ್ಥೆಯ ಭದ್ರ ಅಡಿಪಾಯವಾಗಿದ್ದು, ಈ ಕುರಿತು ಸರ್ಕಾರ ಶೀಘ್ರ ದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ ಇದರೊಂದಿಗೆ ಹಲವು ವರ್ಷಗಳಿಂದ ಒಂದೇ ರೂಪದಲ್ಲಿ ಜಾರಿಯಲ್ಲಿದ್ದ ರಾಜ್ಯದ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ವನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ ಮಾತನ್ನು ಹೇಳುತ್ತಾ ಗುಡ್ ನ್ಯೂಸ್ ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....