LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಕಿಚನ್ ಪ್ರಸ್ತಾವನೆಗೆ ಆರಂಭಿದಲ್ಲೇ ವಿರೋಧ ಮನವಿ ಸಲ್ಲಿಕೆ.....

ಬೆಂಗಳೂರು -

ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಗೆ ಅಕ್ಷರ ದಾಸೋಹ ನೌಕರರ ಸಂಘ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಪ್ರಸ್ತುತ ಪ್ರತಿ ಶಾಲೆಗಳಲ್ಲಿ ತಯಾರಿಸ ಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದ ಬದಲು ಕ್ಲಸ್ಟರ್ ಕಿಚನ್‌ಗಳನ್ನು ರಚಿಸುವ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು ಸಂಯೋಜಿತ) ಉಡುಪಿ ಜಿಲ್ಲೆಯ ತಾಲೂಕು ಸಮಿತಿ ಗಳು ತೀವ್ರವಾಗಿ ವಿರೋಧಿಸಿದ್ದು, ಪ್ರಸ್ತಾವನೆಯನ್ನು ವಿರೋಧಿಸಿ ಬಿಸಿಯೂಟ ಯೋಜನೆಯನ್ನು ಮುಂದು ವರಿಸುವಂತೆ ಆಗ್ರಹಿಸಿ ಮನವಿಗಳನ್ನು ಸಲ್ಲಿಸಿವೆ.

ಶಾಲಾ ಶಿಕ್ಷಣ ಇಲಾಖೆಯ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್‌ನ ಜಂಟಿ ನಿರ್ದೇಶಕರು ನ.7ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಡಿಡಿಪಿಐ) ಹಾಗೂ ಶಿಕ್ಷಣ ಅಧಿಕಾರಿಗಳಿಗೆ ಕ್ಲಸ್ಟರ್ ಕಿಚನ್ ರಚಿಸುವ ಕುರಿತಂತೆ ಸಾಧಕ-ಬಾದಕಗಳ ಕುರಿತು ಅಭಿಪ್ರಾಯ ತಿಳಿಸು ವಂತೆ ಸೂಚಿಸಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ.ಪ್ರತಿ ಶಾಲೆಗಳಲ್ಲಿ ತಯಾರಿಸಲಾಗು ತ್ತಿರುವ ಬಿಸಿಯೂಟದ ಬದಲಿಗೆ ಕ್ಲಸ್ಟರ್ ಕಿಚನ್‌ ಗಳನ್ನು ರಚಿಸಬಾರದು ಹಾಗೂ ಬಿಸಿಯೂಟದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಈಗಿರುವ ಅಡುಗೆ ಸಿಬ್ಬಂದಿಗಳಿಗೆ ವಹಿಸುವಂತೆ ಒತ್ತಾಯಿಸಿ ಕುಂದಾಪುರ, ಬೈಂದೂರು, ಉಡುಪಿ, ಕಾರ್ಕಳ ತಾಲೂಕು ಅಕ್ಷರ ದಾಸೋ ನೌಕರರ ಸಂಘ, ಸಂಬಂಧಿತ ಅಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.

ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಕರ ಸಂಘದ ಸೂಚನೆಯನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ತೀವ್ರವಾಗಿ ಖಂಡಿಸಿದೆ. 2001ರಲ್ಲಿ ಸುಪ್ರೀಂ ಕೋರ್ಟಿನ ಆದೇಶದ ಮೂಲಕ ಜಾರಿಗೆ ಬಂದಿರುವ ಐತಿಹಾಸಿಕ ಯೋಜನೆ ಇದಾ ಗಿದ್ದು ಸರಕಾರಿ ಶಾಲೆಗಳ ಮಕ್ಕಳ ಗ್ರಹಿಕೆಯ ಶಕ್ತಿ ಹೆಚ್ಚಿಸಲು, ಮಧ್ಯಾಹ್ನದ ನಂತರ ಶಾಲಾ ಚಟುವಟಿ ಕೆಗಳಲ್ಲಿ ಕ್ರಿಯಾಶೀಲಲಾಗಿರಲು, ಶಾಲೆಗೆ ಗೈರುಹಾಜರಿ ತಡೆಯುವುದು, ಲಿಂಗ, ಜಾತಿ ತಾರತಮ್ಯವನ್ನು ಕಡಿಮೆ ಮಾಡುವ ಉದ್ದೇಶ ಈ ಯೋಜನೆಯಲ್ಲಿದೆ ಎಂದು ಸಂಘ ಹೇಳಿದೆ.

6ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಮಕ್ಕಳು ಇರುವ ಸ್ಥಳದಲ್ಲಿಯೇ ಬೇಯಿಸಿ ತಾಜಾ ಮತ್ತು ಬಿಸಿ ಬಿಸಿ ಆಹಾರ ನೀಡ ಬೇಕೆಂಬುದು ಸುಪ್ರೀಂ ಕೋರ್ಟಿನ ಆದೇಶವಾಗಿದೆ. ಇದರ ಆಧಾರದಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಿ ಪ್ರತಿ ಶಾಲೆಯಲ್ಲಿ ಅಡುಗೆ ಕೋಣೆಗಳನ್ನು ಕಟ್ಟಿ, ಅಗತ್ಯದ ಅಡುಗೆ ಪಾತ್ರೆಗಳು, ಗ್ಯಾಸ್ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಲಾಗಿದೆ.ಈ ಯೋಜನೆಗೆ ಪ್ರತ್ಯೇಕ ನಿದೇರ್ಶನಾಲಯದ ರಚನೆ ಯೂ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಿಸಿಯೂಟ ಯೋಜನೆ ಈಗಿರುವಂತೆ ಮುಂದುವ ರಿಸುವಂತೆ ಯೋಜನೆ ಯಲ್ಲಿ ಇರುವ ಕೆಲವು ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಾಗೂ ಪ್ರಸ್ತಾವಿತ ಸೆಂಟ್ರಲ್ ಕ್ಲಸ್ಟರ್ ಕಿಚನ್ ಪದ್ಧತಿಯನ್ನು ಕೈಬಿಡುವಂತೆ ಆಗ್ರಹಿಸಿ ನ.16ರಂದು ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದ್ದು, ತಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಮುಂದೆ ರಾಜ್ಯ ಮಟ್ಟದಲ್ಲಿ ಅನಿರ್ಧಿಷ್ಟಾವಧಿ ಶಾಲಾ ಅಡುಗೆ ಬಂದ್ ಮಾಡಿ ಮುಷ್ಕರ ನಡೆಸಲಿರುವುದಾಗಿ ಎಚ್ಚರಿಸಲಾಗಿದೆ.

ಕುಂದಾಪುರ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ಇಂದು ಕುಂದಾಪುರ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಚಂದ್ರ ನಾಯ್ಕ್‌ರನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಯಿತು. ನಿಯೋಗದಲ್ಲಿ ತಾಲೂಕು ಅಧ್ಯಕ್ಷೆ ಉಷಾ ನಾಯಕ್, ರೇಖಾ, ತಾರಾ, ಸುರೇಖಾ, ಸುಜಾತಾ, ಶಕುಂತಲಾ, ಶಾರದ, ಸಿಐಟಿಯು ಮುಖಂಡ ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.ಬೈಂದೂರು ಮತ್ತು ಕಾರ್ಕಳಗಳಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಅರ್ಪಿ ಸಲಾಯಿತು. ತಾಲೂಕು ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಉಡುಪಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಕಿಚನ್ ಪ್ರಸ್ತಾವನೆಗೆ ಆರಂಭಿದಲ್ಲೇ ವಿರೋಧ ಮನವಿ ಸಲ್ಲಿಕೆ.....ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಕಿಚನ್ ಪ್ರಸ್ತಾವನೆಗೆ ಆರಂಭಿದಲ್ಲೇ ವಿರೋಧ ಮನವಿ ಸಲ್ಲಿಕೆ.....8ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ಲಾಟರಿ.....ಮಹತ್ವದ ಅಪ್ಡೇಟ್.....ಶಿಕ್ಷಕರ ವರ್ಗಾವಣೆ ನೂತನ ಕರಡು ನಿಯಮ ಪ್ರಕಟ.....ನಿರ್ಣಾಯಕ ಹುದ್ದೆಗೆ ಹೋದ್ರೆ 9 ವರ್ಷ ಸೇವೆ ಕಡ್ಡಾಯ.....ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ..... ಹಲವು ಸಮಸ್ಯೆ ಗಳ ಕುರಿತು ಚರ್ಚೆ.....ಕನ್ನಡ ಶಾಲೆಗಳ ಖಾಸಗೀಕರಣಕ್ಕೆ ವಿರೋಧ.....ನಾಲ್ಕು ತಿಂಗಳಿನಿಂದ ಸಂಬಳವಿಲ್ಲದ ಬಿಸಿಯೂಟ ಅಡುಗೆ ಸಿಬ್ಬಂದಿ.....ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್.....ಸರ್ಕಾರದ ವಿರುದ್ಧ ನಡೆಯಲಿದೆ ಪ್ರತಿಭಟನೆ.....ಹೆಸ್ಕಾಂ ಸದಸ್ಯರಾಗಿ ಈಶ್ವರ ಶಿವಳ್ಳಿ ನೇಮಕ..... ಪುತ್ರಿಯ ವಿವಾಹಕ್ಕೆ ಶಿಕ್ಷಣ ಸಚಿವರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಕೋನರೆಡ್ಡಿ ದಂಪತಿ.....