LIVE TV LocalCrimeNationalInternationalPoliticsEducationTechnologyEntertainmentSportsFeature
State News

OPS ಭಾಗ್ಯ ಕ್ಕೆ ವೇಗ ನೀಡಿದ ಶಾಲಾ ಶಿಕ್ಷಣ ಇಲಾಖೆ.....ಅಪ್ಡೇಟ್ ಮಾಹಿತಿ.....

ಬೆಂಗಳೂರು -

2005-06 ಹಾಗೂ 2006-07ನೇ ಸಾಲಿನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ ದಿನಾಂಕ 01-04-2006ರ ನಂತರ ಸೇವೆಗೆ ಸೇರಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆ ಮತ್ತಷ್ಟು ವೇಗ ನೀಡಿದೆ .

ಈ ಕುರಿತಂತೆ ಅರ್ಹ ಶಿಕ್ಷಕರ ಪ್ರಸ್ತಾವನೆಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕೂಡಲೇ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ (ಆಡಳಿತ) ಜ್ಞಾಪನಾ ಪತ್ರದ ಮೂಲಕ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.

ದಿನಾಂಕ 01-04-2006ರ ಪೂರ್ವದಲ್ಲಿ ಹೊರಡಿ ಸಲಾದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ, ಆ ದಿನಾಂಕದಂದು ಅಥವಾ ನಂತರ ದಲ್ಲಿ ಸೇವೆಗೆ ಸೇರಿದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆಯ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸಲು ಈಗಾಗಲೇ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಸರ್ಕಾರ ಪರಿಶೀಲಿಸಿ ಆದೇಶ ಹೊರಡಿಸಿದೆ ಆದರೆ, ರಾಜ್ಯದ ಕೆಲವು ಜಿಲ್ಲೆಗಳಿಂದ ಈ ಸಂಬಂಧ ಇನ್ನೂ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿರುವುದು ಕಂಡು ಬಂದಿದೆ.ಕೂಡಲೇ ಮಾಹಿತಿ ರವಾನಿಸಲು ತಾಕೀತು

ಈ ಹಿನ್ನೆಲೆಯಲ್ಲಿ, ಇಂತಹ ಅನುಮೋದನೆಗೆ ಅರ್ಹ ರಾಗಿರುವ ಶಿಕ್ಷಕರು ಯಾರೂ ವಂಚಿತರಾಗದಂತೆ ಕ್ರಮವಹಿಸಲು ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಸೌಲಭ್ಯಕ್ಕೆ ಅರ್ಹರಾಗಿರುವ ಶಿಕ್ಷಕರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಅಗತ್ಯ ದಾಖಲೆಗಳು ಹಾಗೂ ಸೂಕ್ತ ಶಿಫಾರಸ್ಸಿನೊಂದಿಗೆ ಕಚೇರಿಗೆ ತಕ್ಷಣವೇ ಸಲ್ಲಿಸಬೇಕೆಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಆದೇಶಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂಟ್ರೋಲ್ ತಪ್ಪಿದ HDMC JE ಗಳು.....ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜೂನಿಯರ್ ಇಂಜಿನಿಯರ್‌ಗಳದ್ದೇ ದರ್ಬಾರ್.....OPS ಭಾಗ್ಯ ಕ್ಕೆ ವೇಗ ನೀಡಿದ ಶಾಲಾ ಶಿಕ್ಷಣ ಇಲಾಖೆ.....ಅಪ್ಡೇಟ್ ಮಾಹಿತಿ.....ಹೂಲಿ ಗ್ರಾಮದ ದ್ವಾರಬಾಗಿಲು ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ ನೀಡಿದ ವಿರೇಶ ಬ್ಯಾಹಟ್ಟಿ.....ಸಮಾಜ ಸೇವೆಯಲ್ಲಿ ಸದಾ ಮುಂದು.....KSPSTA ಮಾಜಿ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ರಾಜಕೀಯ ಇನಿಂಗ್ಸ್ ಆರಂಭ .....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....ಕಬ್ಬು ಬೆಳೆದ ರೈತರ ಸಮಸ್ಯೆ ಗೆ ಪರಿಹಾರ ಕಲ್ಪಿಸಿದ ಕೇಂದ್ರ ಸರ್ಕಾರ.....ಅಮಾನತುಗೊಂಡ BEO ಗೆ ಹುದ್ದೆ ನೀಡಿದ ರಾಜ್ಯ ಸರ್ಕಾರ.....ಈ ತಿಂಗಳಿನಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.....ಎಷ್ಟು ಹೆಚ್ಚಾಗಲಿದೆ ಮೂಲ ವೇತನ ಕಂಪ್ಲೀಟ್ ಮಾಹಿತಿ.....ಅದ್ದೂರಿಯಾಗಿ ಶಾಸಕ ವಿಶ್ವಾಸ್ ವೈದ್ಯ ಹುಟ್ಟು ಹಬ್ಬ ಆಚರಣೆ.....ವಿರೇಶ ಬ್ಯಾಹಟ್ಟಿ ಆಂಡ್ ಟೀಮ್ ನಿಂದ ಅದ್ದೂರಿ ಆಚರಣೆ ಆತ್ಮೀಯರ ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ಜನಸೇವಕ.....