ಇಟಾವಾ -
ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೋಳು ತಲೆಯ ವಿದ್ಯಾರ್ಥಿ ಯೊಬ್ಬನನ್ನು ತಬಲಾದಂತೆ ಬಾರಿಸಿದ ಶಿಕ್ಷಕ ದಿನೇಶ್ ಕುಮಾರ್ ನನ್ನು ಸಧ್ಯ ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಲಾಗಿದೆ ಈ ಒಂದು ಆದೇಶದ ಬೆನ್ನಲ್ಲೇ ಸಧ್ಯ ಈ ಘಟನೆಗೆ ಕಾರಣರಾದ ದಿನೇಶ್ ಕುಮಾರ್ ಮಾಥುರ್ ಎಂಬ ಶಿಕ್ಷಕ ಈ ಕೃತ್ಯ ಎಸಗಿದ ಆರೋಪಿ ತರಗತಿಯೊಳಗೆ ಶಿಕ್ಷಕ ಕುರ್ಚಿಯ ಮೇಲೆ ಕುಳಿತಿದ್ದರೆ ಎದುರಿಗೆ ಬಾಲಕನೊಬ್ಬ ನೆಲದ ಮೇಲೆ ಕುಳಿತ್ತಿದ್ದಾನೆ.
ನಂತರ ಶಿಕ್ಷಕ ಆ ವಿದ್ಯಾರ್ಥಿ ತಲೆಯ ಮೇಲೆ ಕೈಗಳನ್ನಿಟ್ಟು ತಬಲಾ ನುಡಿಸುವ ಶೈಲಿಯಲ್ಲಿ ಬಾರಿಸಲು ಶುರು ಮಾಡಿದ್ದಾರೆ. ಮಗುವಿನ ತಲೆಯನ್ನೇ ವಾದ್ಯ ದಂತೆ ಬಳಸಿಕೊಂಡು ಅಪಹಾಸ್ಯ ಮಾಡಿದ್ದು ವಿಡಿಯೋ ವನ್ನು ಹಂಚಿಕೊಂಡ ಬೆನ್ನಲ್ಲೇ ವೈರಲ್ ಆಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶ ಭುಗಿಲೇಳುತ್ತಿದ್ದಂತೆ, ಈ ವಿಷಯ ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತ ವಾಗಿದೆ. ಶಿಕ್ಷಕನ ಈ ನಡೆ ಶಿಸ್ತುಭಂಗ ಎಂದು ಪರಿಗಣಿಸಿದ ಶಿಕ್ಷಣ ಇಲಾಖೆ, ದಿನೇಶ್ ಕುಮಾರ್ ಮಾಥುರ್ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕನನ್ನು ಕೇವಲ ಅಮಾನತು ಮಾಡಿ ಕೈತೊಳೆ ದುಕೊಳ್ಳದ ಶಿಕ್ಷಣ ಇಲಾಖೆ ಘಟನೆಗೆ ಸಂಬಂಧಿ ಸಿದಂತೆ ಸಮಗ್ರ ತನಿಖೆಗೂ ಆದೇಶಿಸಿದೆ. ತರಗತಿ ಕೊಠಡಿಯಲ್ಲಿ ಇಂತಹ ಅಶಿಸ್ತು ಮತ್ತು ಬೇಜವಾಬ್ದಾ ರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತನಿಖಾ ವರದಿ ಕೈಸೇರಿದ ನಂತರ ಶಿಕ್ಷಕನ ವಿರುದ್ಧ ಮುಂದಿನ ಕಠಿಣ ಕಾನೂನು ಮತ್ತು ಇಲಾಖಾ ಕ್ರಮ ಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಇಟಾವಾ ......