ಮಂಗಳೂರು -
ಶನಿವಾರ ಪೂರ್ಣ ತರಗತಿ ನಡೆಸಲು ಮಂಗಳೂರು ಡಿಡಿಪಿಐ ಆದೇಶ ಮಾಡಿದ್ದಾರೆ ಹೌದು ದ.ಕ. ಜಿಲ್ಲೆ ಯಲ್ಲಿ ಸುರಿದ ಭಾರೀ ಮಳೆಯ ಸಂದರ್ಭ ವಿದ್ಯಾರ್ಥಿ ಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸುವ ಸಲು ವಾಗಿ ಸೆಪ್ಟೆಂಬರ್ ಎರಡನೇ ವಾರ ಅಂದರೆ ಸೆ.12 ರಿಂದ ಪ್ರತೀ ಶನಿವಾರ ದಿನವಿಡೀ ತರಗತಿಯನ್ನು ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ಮಳೆಯ ಕಾರಣದಿಂದ ಜಿಲ್ಲೆಯ ಕೆಲವು ತಾಲೂಕು ಗಳಲ್ಲಿ 10ಕ್ಕಿಂತ ಹೆಚ್ಚು ದಿನ ಶಾಲೆಗಳಿಗೆ ರಜೆ ನೀಡ ಲಾಗಿತ್ತು. ಇದರಿಂದ ಪಠ್ಯ ಪ್ರವಚನಕ್ಕೆ ತುಂಬಾ ಹಿನ್ನಡೆಯಾಗಿತ್ತು. ಆ ರಜೆಯನ್ನು ಸರಿದೂಗಿಸಲು ಶನಿವಾರ ಪೂರ್ಣ ತರಗತಿ ಸಹಿತ ಉಳಿದ ರಜೆ ದಿನಗಳನ್ನು ಬಳಕೆ ಮಾಡುವುದು, ವಿಶೇಷ ತರಗತಿ ಗಳನ್ನು ನಡೆಸುವ ವಿಚಾರದಲ್ಲಿ ಪ್ರತಿ ಶಾಲೆಯ ಹಂತದಲ್ಲಿಯೇ ತೀರ್ಮಾನ ಮಾಡುವಂತೆ ಸೂಕ್ತ ದಾಖಲೆಯನ್ನು ಇಟ್ಟುಕೊಳ್ಳುವಂತೆ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಸೂಚಿಸಿದ್ದಾರೆ.
ಅದರಂತೆ ಸರಕಾರಿ ಮತ್ತು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು.....