LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಅಗಲಿದ ಮಹಾನ್ ನಟನಿಗೆ ಸರ್ಕಾರಿ ಶಾಲೆಯಲ್ಲೂ ಭಾವ ಪೂರ್ಣ ನಮನ ಸಂತಾಪ ಪ್ರಾರ್ಥನೆಯೊಂದಿಗೆ ಮೌನಾಚರಣೆ ಮಾಡಿ ನೆಚ್ಚಿನ ನಟನನ್ನು ನೆನೆದ ನಮ್ಮ ಶಿಕ್ಷಕರು, ವಿದ್ಯಾರ್ಥಿಗಳು.....

ಧಾರವಾಡ -

ಕನ್ನಡ ಚಿತ್ರರಂಗದ ಮಹಾನ್ ನಟ ಪುನೀತ್ ರಾಜಕುಮಾರ ನಿಧನಕ್ಕೆ ನಾಡಿನಾದ್ಯಂತ ಎಲ್ಲರೂ ಸಂತಾಪವನ್ನು ಸೂಚಿಸಿದ್ದು ಇದರೊಂದಿಗೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಕರು ಕೂಡಾ ಸಂತಾಪವನ್ನು ಸೂಚಿಸಿದ್ದಾರೆ.ಹೌದು ಚಿಕ್ಕ ವಯಸ್ಸಿನಲ್ಲಿ ಅಗಲಿದ ಮಹಾನ್ ನಟನಿಗೆ ನಾಡಿನ ಹಲವೆಡೆ ಭಾವಪೂರ್ಣ ನಮನ ಸಂಪಾತ ಕಂಡು ಬಂದಿತು.

ಹೌದು ಕನ್ನಡದ ಕಲಾವಿದ ನಟರಾದ ಪುನೀತ್ ರಾಜಕುಮಾರ್ ಇವರ ಆತ್ಮಕ್ಕೆ ಶಾಂತಿ ಕೋರಿ ಧಾರವಾಡ ಜಿಲ್ಲೆಯ ಕಲಘಟಗಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಭಾವಪೂರ್ಣ ಸಂತಾಪದೊಂದಿಗೆ ನಮನವನ್ನು ಸಲ್ಲಿಸಿದರು.ಶಾಲೆಯಲ್ಲಿ ಪ್ರತಿ ದಿನದಂತೆ ಪ್ರಾರ್ಥನೆಯ ಮಧ್ಯೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೌನಾಚರಣೆ ಯನ್ನು ಮಾಡಿ ಕನ್ನಡ ಚಿತ್ರ ರಂಗದ ಮಹಾನ್ ನಾಯಕ ನಟನಿಗೆ ನಮನವನ್ನು ಸಲ್ಲಿಸಿದರು

ಪ್ರಧಾನ ಗುರುಗಳಾದ ,A G ದೇವಲಾಪೂರ,ಶಿಕ್ಷಕ ಬಂಧು ಗಳಾದ S A ಚಿಕನರ್ತಿ, ಶ್ರೀಮತಿ J A ವೆರ್ಣೇಕರ, ಶ್ರೀಮತಿ J A ಖಾಜಿ,ಸೈಯದ್ ಅಸ್ಪಕ್ ಅಹ್ಮದ್,ಶ್ರೀಮತಿ ಪಿ ಜಿ ಬಡಪ್ಪನವರ್, ಶ್ರೀಮತಿ ಎಸ್ಎಂ ಸೊಬಗಿನ, ಶ್ರೀಮತಿ N M ಹೊಸೂರ್,ಶ್ರೀಮತಿ ಅಶ್ವಿನಿ ಎನ್ ಸೇರಿದಂತೆ ವಿದ್ಯಾರ್ಥಿಗಳು ಅಗಲಿದ ಮೇರುನಟ ಪುನೀತ್ ರಾಜಕುಮಾರವರಿಗೆ ಪ್ರಾರ್ಥನೆಯಲ್ಲಿ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು.

ಇನ್ನೂ ಇತ್ತ ಗುಡಗೇರಿಯ ಫ.ಚ.ಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಗುಡಗೇರಿಯಲ್ಲೂ ಮಹಾನ್ ನಾಯಕ ನಟನನ್ನು ನೆನೆಯಲಾಯಿತು.ಶಾಲೆಯ ಮಕ್ಕಳು ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿ ಮೌನಾಚರಣೆ ಮಾಡಿ ಅಗಲಿದ ಮಹಾನ್ ಕಲಾವಿದನಿಗೆ ಭಾವಪೂರ್ಣ ನಮನಗೊಂದಿಗೆ ಸಂತಾಪ ವನ್ನು ಸೂಚಿಸಿದರು.ಈ ಒಂದು ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಡಿ ದೊಡಮನಿ,ಶಿಕ್ಷಕ ಬಂಧುಗಳಾದ ಎಮ್ ಎಸ್ ತಿರ್ಲಾಪೂರ,ಐ ಆರ್ ಕೊಡ್ಲಿ,ಅರವಿಂದ ಮರಸಿದ್ದನ್ನವರ,ಎಮ್ ಎಮ್ ನದಾಫ್, ಶ್ರೀಮತಿ ಭೈರವಿ,ವಾಯ್ ಎಸ್ ಸೂರೆ,ಶ್ರೀಮತಿ ಶೀಲಾವತಿ ಶ್ರೀಮತಿ ಸಿ ಎ ಪಾಟೀಲ,ಎಮ್ ಬಿ ಪಾಟೀಲ,ಉಮೇಶ ಮಡಿವಾಳರ,ಎನ್ ಎ ಖಾಜಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......