ಬೆಂಗಳೂರು -
ದಸರಾ ರಜೆ ಕೇಳಿದ್ದೇ ತಪ್ಪಾಯ್ತಾ 6 ಗಂಟೆ ಕೂಡಿ ಹಾಕಿ 20 ಮಕ್ಕಳಿಗೆ TC ಕೊಟ್ಟ ಕಾಲೇಜ್ ವಿದ್ಯಾರ್ಥಿ ಗಳ ಭವಿಷ್ಯದ ಜೊತೆ ಚೆಲ್ಲಾಟ ಹೌದು ಇಂತಹ ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ ದಸರಾ ಹಬ್ಬಕ್ಕೆ ರಜೆ ಕೊಡಿ ಅಂತ ಕೇಳಿದ್ದೇ ವಿದ್ಯಾರ್ಥಿಗಳಿಗೆ ಮುಳುವಾಯ್ತಾ. ರಜೆ ಕೇಳಿದ ಮಕ್ಕಳಿಗೆ ಟಿಸಿ ಕೊಟ್ಟು, ಬೌನ್ಸರ್ಗಳಿಂದ ಬೆದರಿಕೆ ಹಾಕಿದ್ರಾ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಪಿಯು ಕಾಲೇಜೊಂದರ ವಿರುದ್ಧ ಇಂತಹ ಗಂಭೀರ ಆರೋಪಗಳು ಕೇಳಿಬಂದಿವೆ.
ಬೆಂಗಳೂರಿನ ಕೋಗಿಲು ಬಳಿಯ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಕ್ಟೋಬರ್ 13ರಂದು ದಸರಾ ಹಬ್ಬಕ್ಕೆ ರಜೆ ನೀಡು ವಂತೆ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ಯನ್ನು ಒತ್ತಾಯಿಸಿದ್ದರು ಆದರೆ ರಜೆ ನೀಡುವ ಬದಲು ಸುಮಾರು 15ರಿಂದ 20 ವಿದ್ಯಾರ್ಥಿಗಳಿಗೆ ಟಿಸಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಕ್ಟೋಬರ್ 14ರಂದು ಕಾಲೇಜಿಗೆ ಬಂದ ವಿದ್ಯಾರ್ಥಿ ಗಳನ್ನು ಕಂಪ್ಯೂಟರ್ ಕ್ಲಾಸ್ರೂಮ್ನಲ್ಲಿ ಕೂಡಿ ಹಾಕಿ, ಸುಮಾರು ಆರು ಗಂಟೆಗಳ ಕಾಲ ಬೆದರಿಕೆ ಹಾಕಲಾಗಿದೆ ಕಾಲೇಜಿಗೆ ಬೌನ್ಸರ್ಗಳನ್ನು ಕರೆಸಿ ಮಕ್ಕಳನ್ನು ಹೆದರಿಸಲಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದ ವಿಡಿಯೋ ಹಾಗೂ ಫೋಟೊಗಳನ್ನು ಡಿಲೀಟ್ ಮಾಡುವಂತೆಯೂ ಒತ್ತಡ ಹೇರಲಾಗಿದೆ ಎನ್ನಲಾಗಿದೆ.
ಇನ್ನು, ಕಾಲೇಜು ಮುಖ್ಯಸ್ಥ ಸಲ್ಮಾನ್ ವಿದ್ಯಾರ್ಥಿ ಗಳನ್ನು ಎಲ್ಲರ ಎದುರು ಮಂಡಿಯೂರುವಂತೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ಸಂಜೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿ ಸಲಾಗಿದ್ದು, ಪೋಷಕರ ಇಮೇಲ್ಗೆ ಟಿಸಿ ನೀಡಿರು ವುದಾಗಿ ಸಂದೇಶ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಈ ಬೆಳವಣಿಗೆಯಿಂದ ಕೆಲವು ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯ ವಾಗಿದೆ. ಸದ್ಯ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 127(2), 351(2), 3(5) ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ದಸರಾ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಟಿಸಿ ನೀಡಲಾಗಿದೆ ಎಂಬ ಆರೋಪ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾಲೇಜು ಆಡಳಿತದ ವಿರುದ್ಧ ಕೇಳಿಬಂದಿರುವ ಆರೋಪಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು .....