ರಾಮದುರ್ಗ -
ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿರುವ ಘಟನೆ ರಾಮದುರ್ಗ ದಲ್ಲಿ ನಡೆದಿದ್ದು ಈ ಒಂದು ಹಲ್ಲೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಪ್ರಕಾಶ ಗಾಯಕವಾಡಗೆ ಮನವಿ ಸಲ್ಲಿಸಿದರು.
ನ್ಯಾಯಾಲಯದ ಆದೇಶದಂತೆ ಹೆಸರು ದಾಖಲಿಸುವ ವಿಷಯಕ್ಕೆ ಸಂಬಂಧಿಸಿ ವಕೀಲರೊಬ್ಬರು ಕಂದಾಯ ಕಚೇರಿಗೆ ತೆರಳಿ ಅಂಗವಿಕಲ ಸೋಮಶೇಖರ ಭೂಷಣ್ಣವರ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಗ್ರಾಮ ಆಡಳಿತಾಧಿಕಾರಿ ಗಳಿಗೆ ರಕ್ಷಣೆ ನೀಡಲು ಸರ್ಕಾರ ಸೂಕ್ತ ಕಾನೂನು ರಚಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗದು ಕೊಳ್ಳಬೇಕು ಎಂದು ಮನವಿ ಮೂಲಕ ಆಗ್ರಹಿಸಿ ದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಐ.ವೈ. ಪವಾಡಿಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವು ಗೊರವನಕೊಳ್ಳ, ಮಹೇಶ ತೆಂಗಿನಕಾಯಿ, ಅಕ್ಕಮಹಾದೇವಿ ಹಲಕಿ, ಲೋಕೇಶ ಚವ್ಹಾಣ, ಸಂಜು ಹಿರೇಮಠ, ಪ್ರವೀಣ ಖಾನಾಪುರ, ತಮ್ಮಣ್ಣ ಪಾಟೀಲ, ನಿಂಗನಗೌಡ ಚಿಗದಮ್ಮನವರ, ಸಮೀರ್ ಮಾಲದಾರ, ಮಣಿಪ್ರಸಾದ ಕಂಠಿಮಠ, ಗೋವಿಂದ ಚೌಹಾಣ, ಸಂಗಪ್ಪ ಹೊಸಮನಿ, ಶಿವಲೀಲಾ ಬಾಗೇವಾಡಿ, ರೇಖಾ ಹುಲ್ಲನ್ನವರ, ಅಶ್ವಿನಿ ಹವೇಲಿ, ರವಿಕುಮಾರ ಕುಂಬಾರ, ಮೀನಾಕ್ಷಿ ಲಮಾಣಿ, ಪದ್ಮಾ ತುಂಗಳ, ಶೈಲಾ ಅಕ್ಕಿಮರಡಿ, ಸಂತೋಷ ಬೀಳಗಿಕರ ಇತರರಿದ್ದರು.
ಸುದ್ದಿ ಸಂತೆ ನ್ಯೂಸ್ ರಾಮದುರ್ಗ.....