ಸವದತ್ತಿ -
ನಿವೃತ್ತ ಮುಖ್ಯ ಶಿಕ್ಷಕರೊಬ್ಬರಿಗೆ ಬರಬೇಕಿದ್ದ 300 ದಿನಗಳ ಗಳಿಕೆ ರಜೆಗಳ ನಗದೀಕರಣ ಮಾಡಿ ಕೊಡಲು ₹5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕಚೇರಿ ಅಧೀಕ್ಷಕ ವಿಠ್ಠಲ ರಾವಳ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ
ಸವದತ್ತಿ ಪಟ್ಟಣದ ಪದಕಿಪುರಂ ನಗರದ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಶೈಲ ಬಸಪ್ಪ ಬೆಟ್ಟದ ಅವರು ವಯೋನಿವೃತ್ತಿ ಹೊಂದಿದ ಬಳಿಕ ಕಾನೂನು ಬದ್ಧ ವಾಗಿ ಸಿಗಬೇಕಿದ್ದ 300 ದಿನಗಳ ಗಳಿಕೆ ರಜೆಗಳ ನಗದೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದರು ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಚೇರಿ ಅಧೀಕ್ಷಕ ವಿಠ್ಠಲ ರಾವಳ ₹5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು
ಈ ಕುರಿತು ಶ್ರೀಶೈಲ ಬೆಟ್ಟದ ಅವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು. ಲಂಚದ ಹಣ ಸ್ವೀಕರಿಸುವ ವೇಳೆ ವಿಠ್ಠಲ ರಾವಳ ಅವರನ್ನು ಹಣದ ಸಮೇತ ಬಂಧಿಸಲಾಗಿದ್ದು ವಶಕ್ಕೆ ತೆಗೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮಾಡ್ತಾ ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಸವದತ್ತಿ.....