LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕಿ ಬಂಧನ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿರುವ ಪೊಲೀಸರು.....

ಉಡುಪಿ -

ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಬೆದರಿಕೆ ಹಾಕಿ 42,97,350 ರೂ. ಹಣ ವಸೂಲಿ ಮಾಡಿ ಹಿಂದಿರುಗಿಸದೆ ಮೋಸ ಮಾಡಿರುವ ಆರೋಪದಲ್ಲಿ ಶಿಕ್ಷಕಿ ಯೊಬ್ಬರ‌ನ್ನು ಉಡುಪಿ ಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಬೈಂದೂರು ತಾಲೂಕಿನ ಯಡ್ತರೆ ಮಯ್ಯಾಡಿ ಮೂಲದ ಬೆಂಗಳೂರು ಬಸವೇಶ್ವರ ನಗರದ ನಿವಾಸಿ ನಾಗರತ್ನ ಎಚ್. (42) ಹಾಗೂ ಕಾರ್ಕಳ ಮಿಯಾರು ಮೂಲದ ಬೆಂಗಳೂರು ಮೆಜಿಸ್ಟಿಕ್ ನಿವಾಸಿ ಹೇಮಂತ್ (41) ಬಂಧಿತ ಆರೋಪಿಗಳು.

ಉಡುಪಿಯ ಪ್ರದೀಪ್ ಕೆ. ಎಂಬವರು ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡಿಕೊಂಡಿದ್ದು, ಇವರು ತನ್ನ ವಿವಾಹದ ಬಗ್ಗೆ ಹುಡುಗಿಯನ್ನು ಹುಡುಕುತ್ತಿದ್ದರು. 2024ರ ಜನವರಿಯಲ್ಲಿ ಕನ್ನಡ ಜೋಡಿ ಮ್ಯಾಟ್ರಿ ಮೋನಿ ಆಪ್‌ನಲ್ಲಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಎಸ್. ಕಡಂಬಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಡಬೆಟ್ಟು ಹೆಣ್ಬೇರು ನಿವಾಸಿ ನಾಗರತ್ನ ಎ. ಎಂಬವರ ಪರಿಚಯವಾಗಿತ್ತು.

ಪ್ರದೀಪ್ ಅವರ ಜೊತೆ ವಿವಾಹದ ಬಗ್ಗೆ ಮಾತನಾಡಿದ್ದಳು ಆದರೆ ಪ್ರದೀಪ್ ಆಕೆಯ ಪ್ರಸ್ತಾಪವನ್ನು ಒಪ್ಪದೇ ತನ್ನ ಜಾತಿಯ ಹೆಣ್ಣನ್ನು ಮದುವೆಯಾಗುವುದಾಗಿ ಹೇಳಿ ನಿರಾಕರಿಸಿದ್ದರು. ನಂತರದ ದಿನಗಳಲ್ಲಿ ನಾಗರತ್ನ, ಪ್ರದೀಪ್‌ಗೆ ಕರೆ ಹಾಗೂ ಮೆಸೇಜ್‌ಗಳನ್ನು ಮಾಡಿಕೊಂಡು ತನ್ನ ಕಷ್ಟಗಳನ್ನು ಹೇಳಿಕೊಂಡು ಹಂತ-ಹಂತವಾಗಿ ತನ್ನ ಖಾತೆಗೆ ಹಾಗೂ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಮತ್ತು ತನ್ನ ಅಕ್ಕ ರೇಣುಕಾ ಅವರ ಖಾತೆಗೂ ಹಣ ಹಾಕಿಸಿ ಕೊಂಡಿದ್ದಳು ಎಂದು ದೂರಲಾಗಿದೆ.

ಈ ಹಣವನ್ನು ವಾಪಸ್ಸು ಕೇಳಿದರೆ ಪ್ರದೀಪ್‌ಗೂ ತನಗೂ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಕೇಸು ದಾಖಲಿಸಿ, ಪ್ರದೀಪ್ ಕೆಲಸ ಮಾಡುವ ಉಡುಪಿ ಕಚೇರಿಗೆ ಬಂದು ಸಿಬ್ಬಂದಿ ಮತ್ತು ಗ್ರಾಹಕರ ಎದುರು ಮಾನ ಹರಾಜು ಹಾಕುವುದಾಗಿ ಬೆದರಿ ಸಿದ್ದಳು. ಅಲ್ಲದೇ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹಾಗೂ ಸಂಸ್ಥೆಯ ಹಣವನ್ನು ದುರುಪಯೋಗ ಮಾಡಿ ಮೋಸ ವಂಚನೆ ಮಾಡು ತ್ತಿದ್ದೀರಿ ಎಂದು ಹೇಳಿ ಸುಳ್ಳು ಪತ್ರ ಬರೆದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಕರೆ ಹಾಕಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಕೆ ಇತರರೊಂದಿಗೆ ಸೇರಿಕೊಂಡು ಬಲವಂತವಾಗಿ ಬೆದರಿಸಿ ಹಣ ವಸೂಲಿ ಮಾಡಿ ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ಪ್ರದೀಪ್ ನೀಡಿದ ದೂರಿನಂತೆ ನಾಗರತ್ನ ಎ., ಹೇಮಂತ್ ಕರ್ಕೇರಾ, ಪ್ರಮೋದ್ ಹಾಗೂ ರೇಣುಕಾ ಎಂಬವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಎಸ್ಸೈಗಳಾದ ಭರತೇಶ್ ಕಂಕಣವಾಡಿ, ರತ್ನಾಕರ ಕೆ. ಹಾಗೂ ಸಿಬ್ಬಂದಿ ಪ್ರಸನ್ನ ಸಿ., ಜೀವನ್ ಕುಮಾರ್, ಜಗನ್ನಾಥ ನಾಯ್ಕ, ಹೇಮಂತ್ ಕುಮಾರ್ ಮತ್ತು ಸವಿತಾ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಅ.26ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಸವೇಶ್ವರ ನಗರದಲ್ಲಿ ನಾಗರತ್ನ ಮತ್ತು ಹೇಮಂತ್ ಅವರನ್ನು ವಶಕ್ಕೆ ಪಡೆದು ತನಿಖಾಧಿಕಾರಿಯ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸುದ್ದಿ ಸಂತೆ ನ್ಯೂಸ್ ಉಡುಪಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ.....ದುಬಾರಿ ಜೀವನ.....ಲೋಕಾಯುಕ್ತ ಬಲೆಗೆ ಬಿದ್ದ BEO ಕಚೇರಿಯ ಅಧೀಕ್ಷಕ.....ಟ್ರ್ಯಾಪ್ ಮಾಡಿಸಿದ ನಿವೃತ್ತ ಶಿಕ್ಷಕ.....ಶಿಕ್ಷಕಿ ಬಂಧನ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿರುವ ಪೊಲೀಸರು.....31 BEO ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.....ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....