LIVE TV LocalCrimeNationalInternationalPoliticsEducationTechnologyEntertainmentSportsFeature
State News

ಅಧ್ಯಾಪಕನ ಬಂಧನ - ಸರ್ಕಾರಿ ಕೆಲಸ ಕೊಡಿಸೊದಾಗಿ ವಂಚನೆ ಆರೋಪದಲ್ಲಿ ಬಂಧನ.....

ಬೆಂಗಳೂರು -

ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಕಾಲೇಜು ಅಧ್ಯಾಪಕರೊಬ್ಬರನ್ನು ಬಂಧನ ಮಾಡಲಾಗಿದೆ. ಹೌದು ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತರಾಗಿದ್ದಾರೆ‌ ಮೈಸೂರು ನಗರದ ಖಾಸಗಿ ಕಾಲೇಜ ವೊಂದರಲ್ಲಿ ಅಧ್ಯಾಪಕನಾಗಿದ್ದು ಡಿಟಿಪಿ ಸೆಂಟರ್ ಒಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಯುವತಿಗೆ ವಂಚಿಸಿದ್ದಾನೆ.ಅದೇ ಡಿಟಿಪಿ ಸೆಂಟರ್ ಗೆ ಲೆಟರ್ ಹೆಡ್ ಟೈಪ್ ಮಾಡಿಸಲು ತೆರಳುತ್ತಿದ್ದ ಆರೋಪಿ ಸುರೇಶ್ ಸರ್ಕಾರಿ ಕೆಲಸ ಕೊಡಿ ಸೋದಾಗಿ ಯುವತಿಯನ್ನು ನಂಬಿಸಿದ್ದಾನೆ.

.

ಕೆಲವು ದಿನ ಕಳೆದ ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಇದ್ದು ನೇಮಕಾತಿ ಆದೇಶ ಪಡೆಯಲು ಆರು ಲಕ್ಷ ಹಣ ಕೊಡಬೇಕಾಗುತ್ತದೆ ಎಂದು ಆರೋಪಿ ತಿಳಿಸಿದ್ದಾನೆ.ಈತನ ಮಾತು ನಂಬಿದ ಯುವತಿ ಸಾಲಸೋಲ ಮಾಡಿ ಹಣ ಹೊಂದಿಸಿ ಕೊಟ್ಟಿದ್ದಾರೆ.ಈ ಬಳಿಕ ಬೇರೊಂದು ಡಿಟಿಪಿ ಸೆಂಟರ್ ನಲ್ಲಿ ‌ ಸರ್ಕಾರದ ಲೆಟರ್ ಹೆಡ್ ನಂತೆ ಮಾಡಿಸಿ ಮಹಾರಾಣಿ ಕಾಲೇಜಿನಲ್ಲಿ ಎಫ್ ಡಿ ಎ ಎಂದು ಆಫರ್ ಲೆಟರ್ ಕೊಡಿಸಿದ್ದಾನೆ.ಇದರಿಂದ ಖುಷಿಯಾದ ಯುವತಿ ಅಧ್ಯಾಪಕನಿಗೆ ಧನ್ಯವಾದ ತಿಳಿಸಿದ್ದರು.

ಆಫರ್ ಲೆಟರ್ ಸಹಿತ ವಿಧಾನ ಸೌಧದ ಎಂ.ಎಸ್. ಬಿಲ್ಡಿಂಗ್ ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆ ಬಂದಾಗ ಸತ್ಯ ಬಯಲಿಗೆ ಬಂದಿದೆ.ಈ ನಂತರ ಶಿಕ್ಷಣ ಇಲಾಖೆಯಿಂದಲೆ ಪೊಲೀಸ್ ಠಾಣೆಗೆ ದೂರು ನೀಡಲಾ ಗಿದೆ.ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಈತ ಇನ್ನೂ ಹಲವರಿಗೆ ವಂಚನೆ ಮಾಡಿ ರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......