LIVE TV LocalCrimeNationalInternationalPoliticsEducationTechnologyEntertainmentSportsFeature
State News

ಭೀಕರ ಅಪಘಾತ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಾಣಾಪಾಯದಿಂದ ಪಾರು - ಶಾಲೆಗೆ ಹೊರಟಿದ್ದ ಸಮಯದಲ್ಲಿ ಅಪಘಾತ.....

ಶಿವಮೊಗ್ಗ -

ಎರಡು ಕಾರುಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತವೊಂದು ಸಂಭವಿ ಸಿದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಸಾಗರ ತಾಲ್ಲೂಕಿನ ಮಾಲ್ವೆ ಗ್ರಾಮದ ಬಳಿ ಎರಡು ಕಾರುಗಳ ನಡುವೆ ಸಂಭವಿ ಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ, ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಅವರು ಅದೃಷ್ಟವಶಾತ್ ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಅಧ್ಯಕ್ಷ ಮಾಲತೇಶಪ್ಪ ಅವರು ತಮ್ಮ ಕಾರಿನಲ್ಲಿ ಎಂದಿ ನಂತೆ ಶಾಲೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮಾಲ್ವೆ ಬಳಿ ಇವರ ಬ್ರೆಝಾ ಕಾರು ಹಾಗೂ ಎದುರಿನಿಂದ ಬಂದ ಸ್ವಿಫ್ಟ್ ಕಾರಿನ ನಡುವೆ ಪ್ರಬಲ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳ ಮುಂಭಾಗ ಸಂಪೂರ್ಣ ವಾಗಿ ನಜ್ಜುಗುಜ್ಜಾಗಿದೆ.

ಅಪಘಾತದ ತೀವ್ರತೆಗೆ ಎರಡೂ ಕಾರುಗಳ ಏರ್‌ ಬ್ಯಾಗ್‌ಗಳು ತಕ್ಷಣವೇ ತೆರೆದುಕೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಏರ್‌ಬ್ಯಾಗ್ ಕಾರ್ಯಾಚರ ಣೆಯಿಂದಾಗಿ ಮಾಲತೇಶಪ್ಪ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ದ್ದಾರೆಮತ್ತೊಂದು ಕಾರಿನಲ್ಲಿದ್ದ ಸವಾರರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದರು

ಅಪಘಾತವನ್ನು ಕುರಿತು ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ತನಿಖೆ ಮಾಡ್ತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ ‌.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಗಳಿಗೆ ಪತ್ರಕರ್ತರು, ಯೂಟ್ಯೂಬರ್‌ಗಳ ಪ್ರವೇಶ ನಿರ್ಬಂಧ ಅರ್ಜಿ ವಿಚಾರಣೆಗೆ ನ್ಯಾಯಾಲಯ ನಕಾರ.....ಭೀಕರ ಅಪಘಾತ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಾಣಾಪಾಯದಿಂದ ಪಾರು - ಶಾಲೆಗೆ ಹೊರಟಿದ್ದ ಸಮಯದಲ್ಲಿ ಅಪಘಾತ..... ಮಾತೆ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ - ಪ್ರಶಸ್ತಿ ಗೌರವ ನಮ್ಮ ಸಂಘದ ಒಂದು ಹೆಮ್ಮೆಯ ವಿಚಾರವಾಗಿದೆ ಎಂದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾಗಿರುವ ಡಾ.ಲತಾ. ಎಸ್. ಮುಳ್ಳೂರು.....ಇಂದಿರಾದೇವಿ ಶಿಕ್ಷಣ ಸೇವೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಗೌರವ.....ಪೊಲೀಸ್ ಇಲಾಖೆಯ ಸೇವೆಗೆ ಯಶಸ್ವಿ 19 ವರ್ಷ 19 ವರ್ಷಗಳ ಸೇವಾ ಪಯಣದ ಸಂಭ್ರಮದಲ್ಲಿ ಒಂದೆಡೆ ಸೇರಿದ ಮಿತ್ರರು.....ಸರ್ಕಾರಿ ಶಾಲೆಯಲ್ಲೇ ಸ್ಪೋಕನ್‌ ಇಂಗ್ಲಿಷ್‌ ಕ್ರಾಂತಿ - ಕವನ್ ಮೇಷ್ಟ್ರು ಕಲಿಸಿದ ಪಾಠಕ್ಕೆ ಮಕ್ಕಳೇ ಸಾಕ್ಷಿ....ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ.....ನವಲಗುಂದ ಕ್ಷೇತ್ರವನ್ನು ಬರಗಾಲ ಪೀಡಿತ ಘೋಷಣೆ - ಶಾಸಕ N H ಕೋನರೆಡ್ಡಿ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ.....ಕ್ಷೇತ್ರದ ಸಮಸ್ತ ರೈತರ ಪರವಾಗಿ CM ,DCM ಗೆ ಅಭಿನಂದನೆ ಸಲ್ಲಿಸಿದ ಜನಸೇವಕ.....ರಾಜ್ಯದ ಸಮಸ್ತ ಶಿಕ್ಷಕರ ಬಾಕಿ ವೇತನ ಕುರಿತು ಮಹತ್ವದ ಚರ್ಚೆ ಮಾಡಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....ಬಡ್ತಿಗಾಗಿ ಪತ್ರ ಬರೆದ ರಾಜ್ಯದ ಶಿಕ್ಷಕರು - ಪತ್ರದಲ್ಲಿ ನ್ಯಾಯಕ್ಕಾಗಿ ಒತ್ತಾಯ..... ಸಂಘಟನೆಯ ನಾಯಕರೇ ಒಮ್ಮೆ ನೋಡಿ ಶಿಕ್ಷಕರ ಸಮಸ್ಯೆ ಕುರಿತು ಗಮನಹರಿಸಿ.....ಮಂಗಳೂರಿನಲ್ಲಿ ಬಿಗ್ ಮಿಶ್ರಾ ಹೊಸ ಹೆಜ್ಜೆ ರಿಲಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ಆರಂಭಗೊಂಡ ಮಳಿಗೆ – ವಿಸ್ತಾರಗೊಳ್ಳುತ್ತಿದೆ ಸಂಜಯ ಮಿಶ್ರಾ ಮಾಲೀಕತ್ವದ ಸಂಸ್ಥೆ.....