LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯ ಶಿಕ್ಷಕಿ,ದೈಹಿಕ ಶಿಕ್ಷಕ ಅಮಾನತು - ಇಬ್ಬರನ್ನು ಅಮಾನತು ಮಾಡಿದ CEO.....

ದಾವಣಗೆರೆ -

ಮುಖ್ಯ ಶಿಕ್ಷಕಿ,ದೈಹಿಕ ಶಿಕ್ಷಕ ಅಮಾನತು - ಇಬ್ಬರನ್ನು ಅಮಾನತು ಮಾಡಿದ CEO.....ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ-ಕದರನಹ ಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪವೆಸಗಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಮೊಹಿತೆ ಹಾಗೂ ಇದಕ್ಕೆ ಸಹಕರಿಸಿದ ದೈಹಿಕ ಶಿಕ್ಷಕ ಮಂಜುನಾಥ ಇವರನ್ನು ಅಮಾನತು ಮಾಡಲಾಗಿದೆ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಅಮಾನತು ಆದೇಶ ಮಾಡಿದ್ದಾರೆ.ಶಾಲಾ ಮಕ್ಕಳಿಗೆ ಸರ್ಕಾರ ಹಾಗೂ ಅಜೀಂ ಪ್ರೇಮ್‍ಜಿ ಫೌಂಡೇಷನ್ ವತಿಯಿಂದ ವಾರದ ಎಲ್ಲಾ ದಿನಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲೆಂದು ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡ ಲಾಗುತ್ತದೆ. ವಿತರಣೆ ಮಾಡಿದ ಬಗ್ಗೆ ಆಯಾ ದಿನದಂದು ಎಸ್‍ಎಟಿಎಸ್ ತಂತ್ರಾಂಶದಲ್ಲಿ ದಾಖಲು ಮಾಡಲಾ ಗುತ್ತದೆ

ನವೆಂಬರ್ 13 ರಂದು ಶಾಲೆಯಲ್ಲಿ ಭೌತಿಕವಾಗಿ 87 ಮಕ್ಕಳಿದ್ದು ಇದರಲ್ಲಿ 79 ಮೊಕ್ಕಳಿಗೆ ಮೊಟ್ಟೆ ವಿತರಣೆ ಮಾಡಿ ಉಳಿದ 8 ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡಲಾಗಿರುತ್ತದೆ. ಆದರೆ ಎಸ್‍ಎಟಿಎಸ್ ತಂತ್ರಾಂಶ ದಲ್ಲಿ 104 ಮಕ್ಕಳಿರುತ್ತಾರೆ ಎಂದು ದಾಖಲು ಮಾಡಿರು ವುದು ಕಂಡು ಬಂದಿದ್ದು ಮೊಟ್ಟೆ ವಿತರಣೆಯಲ್ಲಿ ಲೋಪವಾಗಿರುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶಾಲೆಗೆ ಭೇಟಿ ನೀಡಿದಾಗ ಕಂಡುಬಂದಿದೆ

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಮೇರೆಗೆ ಅಮಾನತು ಮಾಡಿ ಆದೇಶ ವನ್ನು ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ದಾವಣಗೆರೆ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......