LIVE TV LocalCrimeNationalInternationalPoliticsEducationTechnologyEntertainmentSportsFeature
Local News

ನಿಂತ ಕಾರ್ಯಾಚರಣೆ ಬೆಳಿಗ್ಗೆ ಮತ್ತೆ ಆರಂಭವಾಗಲಿರುವ ಶೋಧ ಕಾರ್ಯ

ಧಾರವಾಡ -

ಪೊಟೊ ಶೂಟ್ ಮಾಡಲು ಹೋಗಿ ನವಲಗುಂದದ ಕಿರೇಸೂರ ಕಾಲುವೆಯಲ್ಲಿ ನಾಪತ್ತೆಯಾಗಿರುವ ಮೂವರ ಯುವಕರು ಇನ್ನೂ ಪತ್ತೆಯಾಗಿಲ್ಲ. ಒಂಬತ್ತು ಘಂಟೆಗಳ ನಿರಂತರ ಕಾರ್ಯಾಚರಣೆ ನಂತರವೂ ಕಾಲುವೆಯಲ್ಲಿ ಹೋಗಿರುವ ಮೂವರು ಯುವಕರನ್ನು ಹುಡುಕಾಡಿ ಹುಡುಕಾಡಿ ಹುಡುಕಾಡಿ ಕಾರ್ಯಾಚರಣೆ ನಿಲ್ಲಿಸಲಾಯಿತು.

ಕಾಲುವೆಗೆ ಇಂದೇ 200 ಕ್ಯೂ ಸೆಕ್ಸ್‌ ನೀರನ್ನು ಬಿಡಲಾಗಿದೆ.ಹೀಗಾಗಿ ಸಧ್ಯ ಕಾಲುವೆ ತುಂಬಿ ಹರಿಯುತ್ತಿದೆ‌. ಇನ್ನೂ ಕಾಲುವೆಯ ಮೇಲೆ ಪೊಟೊ ಶೂಟ್ ಮಾಡುವಾಗ ಏಕಾಏಕಿಯಾಗಿ ಜೇನುನೊಣಗಳು ದಾಳಿ ಮಾಡಿವೆ ಇದರಿಂದ ಭಯಗೊಂಡ ಐವರು ಪಾರಾಗಲು ನೀರಿನಲ್ಲಿ ಜಿಗಿದಿದ್ದಾರೆ.

ಕೊನೆಗೆ ನೀರಿನಲ್ಲಿ ಬಿದ್ದ ಐವರನ್ನು ನೋಡಿದ ಕುರಿಗಾಹಿ ಒರ್ವ ಯುವತಿ ಹಾಗೂ ಒರ್ವ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ನೀರಿನಲ್ಲಿ ಹೋಗಿರುವ ಇನ್ನೂ ಮೂವರು ಪತ್ತೆಯಾಗಿಲ್ಲ. ಹೀಗಾಗಿ ಸಂಜೆಯಿಂದಲೂ ನಿರಂತರವಾಗಿ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು.ಯಾವುದೇ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಸಧ್ಯ ಕಾರ್ಯಾಚರಣೆ ನಿಲ್ಲಿಸಲಾಗಿದೆ.

ಸಧ್ಯ ಮೂರು ಹಂತದಲ್ಲಿ ಶೋಧವನ್ನು ಮಾಡಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತು ರಾತ್ರಿತಾದ ಕಾರಣಕ್ಕಾಗಿ ನಿಲ್ಲಿಸಲಾಯಿತು.

ಅಗ್ನಿಶಾಮಕ ದಳದ ಟೀಮ್ ಮತ್ತೆ ಬೆಳಿಗ್ಗೆ ಆಪರೇಶನ್ ಬೆಳಿಗ್ಗೆ ಆರಂಭ ಮಾಡಲಿದೆ.‌ ನಿರಂತರವಾಗಿ ಒಂಬತ್ತು ಘಂಟೆಗಳ ಕಾಲ ಹುಡುಕಾಡಿದರು ಮೂವರ ಯುವಕರ ಸುಳಿವು ಸಿಗಲಿಲ್ಲ ಹೀಗಾಗಿ ಸಧ್ಯ ಕಾರ್ಯಾಚರಣೆ ನಿಲ್ಲಿಸಿ ಬೆಳಿಗ್ಗೆ ಆರಂಭಿಸೊದಾಗಿ ಹುಬ್ಬಳ್ಳಿಯ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ್ ಗೋಕಾಕ ಹೇಳಿದರು. ನಾಪತ್ತೆಯಾಗಿದ್ದವರು ಹುಬ್ಬಳ್ಳಿಯ ರಾಮನಗರ ನಿವಾಸಿಗಳಾಗಿದ್ದು ಮಾಜಿ ಮಹಾನಗರ ಪಾಲಿಕೆಯ ಸದಸ್ಯೆ ಸುವರ್ಣಾ ಕಲ್ಲಗುಂಟ್ಲಾ ಮತ್ತು ಭಂಡಾರಿ ಕುಟುಂಬದವರಾಗಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......