LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರನ್ನು ಕೇವಲ ಮಾತಿನಲ್ಲೇ ನಂಬಿಸುತ್ತಿರುವ ಶಿಕ್ಷಕರ ಸಂಘ ಪಾಠ ಕಲಿಸಲು ಮುಂದಾದ ಸಿಡಿದೆದ್ದ ಶಿಕ್ಷಕರು.....

ಬೆಂಗಳೂರು -

ಆತ್ಮೀಯ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಆದ್ಯ ಗಮನಕ್ಕೆ - ಕೇವಲ ಮಾತಿನಲ್ಲೇ ನಂಬಿಸುತ್ತಿರುವ ಶಿಕ್ಷಕರ ಸಂಘ.

ಮತದಾರ ಪಟ್ಟಿ ತಯಾರಿಸುವ ಕೆಲಸದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಕೂಡ ಸಾಮಾನ್ಯ ಶಿಕ್ಷಕನಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ.ಪ್ರತಿಯೊಬ್ಬ ಶಿಕ್ಷಕರಿಗೆ ಆಗುವ ಅನ್ಯಾಯವನ್ನು ವಿರೋಧಿಸಬೇಕಾದ ಶಿಕ್ಷಕರ ಸಂಘ ಎಲ್ಲಿದೆ?.

ಅಧಿಕಾರ ಅನುಭವಿಸಲು ಶಿಕ್ಷಕರಿಂದ ವಂತಿಗೆ ಶುಲ್ಕದ ಹಣ,ಅಧಿಕಾರ ಬೇಕು.ಆದರೆ ಕಣ್ಣಿಗೆ ಕಾಣದೆ ಇಂಥ ಏಷ್ಟೋ ಶಿಕ್ಷಕರಿಗೆ ಅನ್ಯಾಯ ಆಗುತ್ತಿದ್ದರೂ ಮೌನವಹಿ ಸಿರುವದರ ಹಿಂದಿನ ಕಾರಣ ಏನು?.

2008 ರಿಂದಲೂ ನೀವೇ ಅಧಿಕಾರದಲ್ಲಿದ್ದು ನೀವೇ 2016 ರಂದು ಜಾರಿಗೆ ಬಂದ ಸಿ ಮತ್ತು ಆರ್ ನಿಯಮ ಕಡತಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಒಪ್ಪಿಗೆ ಸಹಿ ಮಾಡಿದ್ದು ನೀವೇ ಇವಾಗ ಹೋರಾಟ ಕೈಗೊಳ್ಳುವ ತರ ಮೇಲ್ನೋಟಕ್ಕೆ ನಂಬಿಸುತ್ತಿದ್ದಿರಿ ಅಂತ ಸುಮಾರು 80000 ಪದವೀಧರ ಶಿಕ್ಷಕರಿಗೆ ಶಿಕ್ಷಕರಿಗೆ ತಿಳಿಯದೆ ಇರುತ್ತಾ?

ರಾಜ್ಯ ಸಂಘದ ನಿರ್ದೇಶನದ ಮೇರೆಗೆ ನಾವೆಲ್ಲ ನಿಷ್ಠಾ ತರಬೇತಿ ಬಹಿಷ್ಕಾರ ಮಾಡಿದೆವು,ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನೆರವೇರಿಸಿದೆವು.ಇದರಿಂದ ಯಾವುದೇ ಪರಿಣಾಮ ಬೀರಲಿಲ್ಲ.ತರಗತಿ ಬಹಿಷ್ಕಾರ ಮಾಡಿದರೆ ಈಗಾಗಲೇ ಕೋವಿಡ್ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಗಿದೆ.ಇವಾಗ ತರಗತಿ ಬಹಿಷ್ಕಾರ ಮಾಡಿದರೆ ನಾವು ಪಾಲಕರ ಅವಕೃಪೆಗೆ ಒಳಗಾಗುತ್ತೇವೆ ಅಂತ ಹೇಳುತ್ತಾ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾನ್ ನಾಯಕರು 2 ವರ್ಷಗಳ ಹಿಂದೆ ಕೋರೋಣ ಇರಲಿಲ್ಲ ಅಲ್ವಾ?. ಆವಾಗ ನೀವು ತರಗತಿ ಬಹಿಷ್ಕಾರ ಯಾಕೆ ಮಾಡಲಿಲ್ಲ?.

NPS ಜಾರಿಗೆ ಬಂದು 16 ವರ್ಷಗಳೂ ಮುಗೀತಾ ಬಂದವು.ಕೇವಲ ಚುನಾವಣೆ ಸಮಯದಲ್ಲಿ ಬಂದು ಇದನ್ನು ರದ್ದು ಮಾಡ್ತೀವಿ ಅಂತ ಹೇಳಿ ಅಧಿಕಾರ ಸಿಕ್ಕ ಮೇಲೆ ಅದರ ಕುರಿತು ಒಂದು ಮಾತು ಮಾತಾಡಲ್ಲ ಅಂತ ಪದಾಧಿಕಾರಿಗಳು ನಮಗೆ ಬೇಕಾ?.2006 ರಿಂದ ಹಿಡಿದು NPS ರದ್ದತಿಗೆ ದೊಡ್ಡ ಮಟ್ಟದ ಹೋರಾಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೈಗೊಂಡಿರುವ ಉದಾಹರಣೆ ಇಲ್ಲ ಅಲ್ಲವೇ? ಇದನ್ನೆಲ್ಲ ಅರ್ಥ ಮಾಡಿಕೊಂಡು ಮುಂದಿನ ಬರುವ ದಿನಗಳಲ್ಲಿ ಒಳ್ಳೆಯ ಹೋರಾಟ ಮಾಡುವ ಪ್ರತಿನಿ ಧಿಗಳನ್ನು ಆಯ್ಕೇಮಾಡುವ ನಮ್ಮೆಲ್ಲ ಶಿಕ್ಷಕರ ಜವಾಬ್ದಾರಿ ನಿಮ್ಮದು ಅಲ್ಲವೇ?

ಈ ಒಂದು ಲೇಖನವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ

ಜೈಶಿಕ್ಷಕ,ಜೈ KSPSTA INDI

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......