LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯಕ್ಕೆ ಮಾದರಿಯಾಯಿತು ಈ ಸರ್ಕಾರಿ ಶಾಲೆ - ಮಾದರಿ ಸರ್ಕಾರಿ ಶಾಲೆಯ ಹಿಂದಿನ ಶಿಕ್ಷಕರ ಪರಿಶ್ರಮ ಮೆಚ್ಚುವಂತಹದ್ದು.....

ಹಳೆಮಳಲಿ (ನ್ಯಾಮತಿ) -

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಕಾಯಕ ಎಂದು ಭಾವಿಸಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ ಅಂತಹ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂಬುದಕ್ಕೆ ಹಳೆಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿ.ತುಂಗಭದ್ರಾ ನದಿ ದಡದಲ್ಲಿ 60 ಮನೆಗಳನ್ನು ಹೊಂದಿರುವ ಹೊನ್ನಾಳಿ ಶಿವಮೊಗ್ಗ ಮುಖ್ಯರಸ್ತೆಯಿಂದ 5 ಕಿ.ಮೀ ದೂರದಲ್ಲಿರುವ ಗ್ರಾಮ ಹಳೆಮಳಲಿ.ಈ ಶಾಲೆಯಲ್ಲಿ 1ರಿಂದ 5ನೇ ತರಗತಿ ಯವರೆಗೆ 30 ಮಕ್ಕಳಿದ್ದು ಎಸ್‌ಡಿಎಂಸಿ,ಪೋಷಕರ ಸಹ ಕಾರದಿಂದ ಪೂರ್ವ ಪ್ರಾಥಮಿಕ(ಎಲ್.ಕೆ.ಜಿ ಮತ್ತು ಯು.ಕೆ.ಜಿ) ವಿಭಾಗವನ್ನು 2018-19ನೇ ಸಾಲಿನಿಂದ ಆರಂಭಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ 18 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯದಂತೆ ನೂರ ರಷ್ಟು ದಾಖಲಾತಿ,ಹಾಜರಾತಿ ಮತ್ತು ಕಲಿಕೆಯನ್ನು ಹೊಂದಿ ರುವುದು ಶಾಲೆಯ ವಿಶೇಷ.ಪೂರ್ವ ಪ್ರಾಥಮಿಕ ಶಾಲೆ ಆರಂಭ ಆದಾಗಿನಿಂದ ಪಾಲಕರು ಮಕ್ಕಳನ್ನು ಖಾಸಗಿ ಕಾನ್ವೆಂಟ್‌ಗೆ ಕಳಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಗೋಡೆ ಗಳಿಗೆ ಸಾಧನ ಪದಗಳು,ವರ್ಣಮಾಲೆ,ಅಕ್ಷರಗಳ ಚಪ್ಪರ ಇವೆ.ಮಕ್ಕಳಿಗೆ ಶಿಕ್ಷಕರು ವಾರದಲ್ಲಿ 2 ದಿನ 4 ಅವಧಿಗಳಲ್ಲಿ ಲೇಜಿಮ್,ಡಂಬಲ್ಸ್,ಹೂಪ್ಸ್,ಸರಳ ವ್ಯಾಯಾಮ ಮಾಡಿ ಸುತ್ತಾರೆ.ಪೂರ್ವ ಪ್ರಾಥಮಿಕ ಶಾಲೆಯ ಪುಟಾಣಿಗಳು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪಟಪಟನೆ ಓದುತ್ತಾರೆ. ಉತ್ತಮ ಬರವಣಿಗೆಯೂ ಇದೆ.ಮಗ್ಗಿಗಳನ್ನು ಮೇಲಿನಿಂದ ಕೆಳಕ್ಕೆ,ಕೆಳಗಿನಿಂದ ಮೇಲೆ ಮತ್ತು ಅಡ್ಡಲಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ.

ಇಲ್ಲಿ ಶಾಲಾವನ,ಕೈತೋಟ,ಸುಸಜ್ಜಿತ ತರಗತಿ ಕೊಠಡಿ ಗಳು,ತಾಲ್ಲೂಕಿನಲ್ಲಿಯೇ ಮಾದರಿಯಾದ ಹೈಟೆಕ್ ಅಡುಗೆ ಕೊಠಡಿ,ಮುಖ್ಯಶಿಕ್ಷಕರ ಕೊಠಡಿ,ಶಾಲಾ ಆವರಣದಲ್ಲಿಯೇ ಅಂಗನವಾಡಿ ಕಟ್ಟಡ,ಶೌಚಾಲಯ ಇದೆ.

ಮುಖ್ಯಶಿಕ್ಷಕ ಕರಬಸಪ್ಪ ಅವರೇ ಈ ಮಾದರಿ ಶಾಲೆಯ ರೂವಾರಿ.ಇವರಿಗೆ ಸಹಶಿಕ್ಷಕಿ ಕೆ.ಬಿ.ಕವಿತಾ,ಗೌರವಧನ ಶಿಕ್ಷಕಿ ಎಚ್.ಕೆ. ರಂಜಿತಾ, ಬಿಸಿಯೂಟ ತಯಾರಕರಾದ ಪುಷ್ಪಾ, ಚಂದ್ರಕಲಾ ಮತ್ತು ಗ್ರಾಮಸ್ಥರ ಸಹಕಾರ ದೊರೆತಿದೆ.ಶಾಲೆಯ ಆವರಣದಲ್ಲಿ 6 ತೆಂಗಿನಮರಗಳು, 50 ಅಡಿಕೆ ಮರ,100 ತೇಗದ ಗಿಡ,25 ಇತರ ಜಾತಿಯ ಮರಗಳನ್ನು ಬೆಳೆಸಿರುವುದರಿಂದ ಹಸಿರು ವಾತಾವರಣ ವಿದೆ.ಕೋವಿಡ್ ಸಮಯದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ ಎಂದು ಮುಖ್ಯಶಿಕ್ಷಕ ಕರಬಸಪ್ಪ ಹೇಳಿದರು.

ಪೋಷಕರು,ಹಳೆ ವಿದ್ಯಾರ್ಥಿಗಳು,ಗ್ರಾಮಸ್ಥರು,ದಾನಿಗಳ ಸಹಕಾರದಿಂದ ₹ 1 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್‌ ಆರಂಭಿ ಸುವ ಯೋಜನೆಯನ್ನು ಶಿಕ್ಷಕರು ರೂಪಿಸಿದ್ದು ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎಂ.ಪಿ.ಷಡಾಕ್ಷರಿ, ಉಪಾಧ್ಯಕ್ಷೆ ಮಂಜುಳಮ್ಮ ಮತ್ತು ಸದಸ್ಯರು ಹೇಳಿದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......