This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ನಾಮಪತ್ರ ಸಲ್ಲಿಕೆ ನಾಳೆಯಿಂದ ಮೂರು ದಿನಗಳ ಧಾರವಾಡದಲ್ಲಿ ವಾಹನಗಳ ಮಾರ್ಗ ಬದಲಾವಣೆ – ಧಾರವಾಡದಲ್ಲಿನ ವಾಹನಗಳ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ…..

ನಾಮಪತ್ರ ಸಲ್ಲಿಕೆ ನಾಳೆಯಿಂದ ಮೂರು ದಿನಗಳ ಧಾರವಾಡದಲ್ಲಿ ವಾಹನಗಳ ಮಾರ್ಗ ಬದಲಾವಣೆ – ಧಾರವಾಡದಲ್ಲಿನ ವಾಹನಗಳ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ…..
WhatsApp Group Join Now
Telegram Group Join Now

ಧಾರವಾಡ

ನಾಮಪತ್ರ ಸಲ್ಲಿಕೆ ನಾಳೆಯಿಂದ ಮೂರು ದಿನಗಳ ಧಾರವಾಡದಲ್ಲಿ ವಾಹನಗಳ ಮಾರ್ಗ ಬದಲಾವಣೆ – ಧಾರವಾಡದಲ್ಲಿನ ವಾಹನಗಳ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಯಲ್ಲಿ ಏಪ್ರೀಲ್ 15 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಜೋರಾಗಲಿದ್ದು ಕಾಂಗ್ರೇಸ್ ಬಿಜೆಪಿ ಪಕ್ಷಗಳಿಂದ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.ಇನ್ನೂ ಈ ಒಂದು ಹಿನ್ನಲೆಯಲ್ಲಿ ಧಾರವಾಡ ನಗರದಲ್ಲಿ ತಾತ್ಕಾಲಿಕವಾಗಿ ವಾಹನ ಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದ್ದಾರೆ.

15.04.2024 ರಿಂದ 18.04.2024 ರವರೆಗೆ ಧಾರವಾಡ ನಗರದಲ್ಲಿ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾ ಗಿದೆ.ಈ ಕುರಿತು ಪ್ರಕಟಣೆ ನೀಡಿರುವ ಅವರು ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವ ವಾಹನಗಳು – ಜುಬ್ಲಿ ಸರ್ಕಲ್, ಸಿಎಸ್‍ಐ ಕಾಲೇಜ್ ರೋಡ,ಲೈನ ಬಜಾರ ಮುಖಾಂತರ ಎನ್.ಟಿ.ಟಿ.ಎಫ್ ಕ್ರಾಸ್ ಮುಖಾಂತರ ಹುಬ್ಬಳ್ಳಿ ಕಡೆಗೆ ಹೋಗಬೇಕು.ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು

ಡಿಪೋ ಸರ್ಕಲ್, ಗೊಲ್ಲರ ಓಣಿ ಕ್ರಾಸ್, ಕಮಲಾಪೂರ ಉಸುಕಿನ ಅಡ್ಡಾ,ಮರಾಠಾ ಕಾಲನಿ ರೋಡ ಮುಖಾಂತರ ಹೋಗಬೇಕು. ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ಚರಂತಿಮಠ ಗಾರ್ಡನ್ ಕ್ರಾಸ್, ಕಾಮನಕಟ್ಟಿ ಕೂಟ, ಹೊಸ ಯಲ್ಲಾಪೂರ ಸರ್ಕಲ್,ಸುಣ್ಣದ ಬಟ್ಟಿ ರೋಡ ಮೂಲಕ ಎಲ್.ಎಮ್.ವಿ ವಾಹನಗಳು ಮತ್ತು ಹೆಬ್ಬಳ್ಳಿ ಅಗಸಿ,ಡಿಪೋ ಸರ್ಕಲ್, ಗೊಲ್ಲರ ಓಣಿ, ಮರಾಠಾ ಕಾಲನಿ ರೋಡ ಮೂಲಕ ಬಸ್ಸುಗಳು ಹೋಗಬೇಕು.

ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ದಾಸನಕೊಪ್ಪ ಸರ್ಕಲ್, ಜರ್ಮನ್ ಸರ್ಕಲ್, ಉಪನಗರ ಪಿ.ಎಸ್ ಮೂಲಕ ಹೋಗಬೇಕು.ಗೋವಾ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು ಜರ್ಮನ್ ಸರ್ಕಲ್, ಹಳೇ ಎಸ್.ಪಿ.ಆಪೀಸ್ ಕ್ರಾಸ್, ನಾಯಕ ಅಡ್ಡಾ ಕ್ರಾಸ್, ಹಳೇ ಬಸ್ ನಿಲ್ದಾಣ ಮೂಲಕ ಹೋಗಬೇಕು.

ಹುಬ್ಬಳ್ಳಿ ಮತ್ತು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ಕೋರ್ಟ ಸರ್ಕಲ್, ಕಾಸ್ಮಸ್ ಕ್ಲಬ್ ರೋಡ, ಲೈನ ಬಜಾರ, ಸಿಎಸ್‍ಐ ಕಾಲೇಜ್ ರೋಡ ಮತ್ತು ಬಾಗಲಕೋಟ್ ಪೆಟ್ರೋಲ್ ಪಂಪ, ಮಹಿಷಿ ರೋಡ, ಎಮ್ಮಿಕೇರಿ ಕ್ರಾಸ್, ಹೆಡ್ ಪೋಸ್ಟ ಆಪೀಸ್, ಕೋರ್ಟ ಸರ್ಕಲ್ ಮೂಲಕ ಸಂಚರಿ ಸಬೇಕೆಂದು ಮಹಾನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ……


Google News

 

 

WhatsApp Group Join Now
Telegram Group Join Now
Suddi Sante Desk