ಮೈಸೂರು –
ಉದ್ಯೋಗದಲ್ಲಿರುವ ಪ್ರತಿಯೊಬ್ಬರು ರಜಾ ದಿನಗಳಿಗಾಗಿ ಕಾದು ಕುಳಿತಿರುತ್ತಾರೆ.ಅದರಲ್ಲೂ ಸರ್ಕಾರಿ ಉದ್ಯೋಗದ ಲ್ಲಿರುವ ಕೆಲವರು ಕೆಲಸ ಮಾಡುವುದಕ್ಕಿಂತ ಕಾಲ ಹರಣ ಮಾಡುವುದೇ ಹೆಚ್ಚು ಎಂಬ ಮಾತುಗಳು ಕೇಳಿ ಬರುತ್ತವೆ. ಆದರೆ ಇದಕ್ಕೆ ಹೊರತಾದ ಉದಾಹರಣೆಗಳೂ ಸಿಗುತ್ತವೆ ಆದರೆ ಅದು ಬಲು ಅಪರೂಪ.ಅಂತದೊಂದು ವಿಶೇಷ ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ ಪ್ತಕರಣವೊಂದು ಹೌದು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕಳೆದ 30 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಸೇವಾ ವಧಿಯಲ್ಲಿ ಒಂದೇ ಒಂದು ದಿನ ಕೂಡ ರಜಾ ಹಾಕಿಲ್ಲವೆಂ ದರೆ ನೀವು ನಂಬಲೇಬೇಕು.ಕುವೆಂಪು ವಿವಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಸಿ. ಸೋಮ ಶೇಖರ್ ಇಂಥದೊಂದು ಅಪರೂಪದ ವ್ಯಕ್ತಿತ್ವ ಹೊಂದಿ ದವರಾಗಿ ಸಧ್ಯ ನಿವೃತ್ತರಾಗುತ್ತಿದ್ದಾರೆ.
ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಸಹ ಸಿಬ್ಬಂದಿ ಪಾಲಿಗೆ ಸೋಮಣ್ಣ ಎಂದೇ ಆತ್ಮೀಯವಾಗಿ ಗುರುತಿಸಿಕೊಂಡಿರುವ ಇವರು ಶಿವಮೊಗ್ಗ ಜಿಲ್ಲೆ ಸೊರಬದವರು.1991 ರಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹಂಗಾಮಿ ನೌಕರ ನಾಗಿ ಕೆಲಸಕ್ಕೆ ಸೇರಿದ್ದ ಇವರು ಮುಂದೆ ಹುದ್ದೆ ಕಾಯಂ ಆಗಿ ಪ್ರಥಮ ದರ್ಜೆ ಸಹಾಯಕರಾಗಿದ್ದರು.ತಮ್ಮ ಈ ಸುದೀರ್ಘ 30 ವರ್ಷಗಳ ಸೇವಾವಧಿಯಲ್ಲಿ ಒಂದು ದಿನವೂ ರಜಾ ಹಾಕದೆ ಕೆಲಸ ಮಾಡಿದ ಇವರು ಇಂದು ನಿವೃತ್ತರಾಗುತ್ತಿದ್ದಾರೆ.ವಿಶೇಷ ಸಂಗತಿ ಎಂದರೆ ತಮ್ಮ ದುಡಿ ಮೆಯ ಹಣ ಕೂಡಿಟ್ಟು ವಿಶ್ವವಿದ್ಯಾನಿಲಯದ ಕಲಾ, ವಿಜ್ಞಾನ,ವಾಣಿಜ್ಯ ಹಾಗೂ ಶಿಕ್ಷಣ ವಿಭಾಗದಲ್ಲಿ ತಲಾ ಒಂದೊಂದು ಚಿನ್ನದ ಪದಕ ದತ್ತಿ ಇಟ್ಟಿದ್ದಾರೆ.ಇಂದು ನಿವೃತ್ತಿಯಾಗುತ್ತಿರುವ ಸೋಮಣ್ಣ ಅವರ ಮುಂದಿನ ಜೀವನಕ್ಕೆ ‘ಆಲ್ ದ ಬೆಸ್ಟ್’.