ಬೆಂಗಳೂರು –
ಬಜೆಟ್ ನಲ್ಲಿ ಇಲ್ಲ ಮಹಾ ಸಮ್ಮೇಳನದಲ್ಲೂ ಇಲ್ಲ…..ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗೊದು ಯಾವಾಗ – ಗ್ಯಾರಂಟಿಯಲ್ಲಿ ರಾಜ್ಯ ಸರ್ಕಾರಿ ನೌಕರರಲ್ಲಿ ಮೂಡುತ್ತಿದೆ ನೋ ಗ್ಯಾರಂಟಿಯ ಮಾತುಗಳು ರೈಟ್ ಮುಂದೆ ನೊಡೋಣಾ ಅನ್ನೊದು ಆಯಿತು
ಅದ್ಯಾಕೋ ಎನೋ ರಾಜ್ಯ ಸರ್ಕಾರಿ ನೌಕರರನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದ ಕಾಣುತ್ತಿದೆಯಾ ರಾಜ್ಯ ಸರ್ಕಾರಿ ನೌಕರರ ಬೇಕು ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ವಾ ಕೇವಲ ಮಾತಿನಲ್ಲಿ ಅಷ್ಟೇ ನೌಕರರನ್ನು ಮೆಚ್ಚಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆಯಾ ಹೀಗೆ ಹತ್ತು ಹಲವಾರು ಪ್ರಶ್ನೆಗಳು ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಹುಟ್ಟುಕೊಂಡಿವೆ.ಇದು ಕೂಡಾ ಮಹಾ ಸಮ್ಮೇಳನದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.ಈ ಹಿಂದೆ ಬಜೆಟ್ ನಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಏನಾದರು ಗುಡ್ ನ್ಯೂಸ್ ಸಿಗುತ್ತದೆ ಎಂದುಕೊಳ್ಳಲಾಗಿತ್ತು
ಆ ಒಂದು ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೂಡಾ ಇದ್ದರೂ ಆದರೆ ಅದು ಯಾವುದು ಈಡೇರಲಿಲ್ಲ ಇನ್ನೂ 7 ವರ್ಷಗಳ ನಂತರ ಬೆಂಗಳೂರಿನಲ್ಲಿ ರಾಜ್ಯದ ಸರ್ಕಾರಿ ನೌಕರರ ಮಹಾ ಸಮ್ಮೇಳನ ಎಂಬ ಐತಿಹಾಸಿಕ ಕಾರ್ಯಕ್ರಮವನ್ನ ಹಮ್ಮಿಕೊಳ್ಳ ಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಯವರು ಮುೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಮಾರಂಭ ಮಾಡಿರುವ ಹಿನ್ನಲೆಯಲ್ಲಿ ಮೂರರಲ್ಲಿ ಕನಿಷ್ಟ ಎರಡು ಬೇಡಿಕೆಗಳನ್ನು ಘೋಷಣೆ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು
ಆದರೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಸರ್ಕಾರಿ ನೌಕರರಿಗೆ ನಿರಾಸೆಯನ್ನುಂಟು ಮಾಡಿದ್ದಾರೆ.ಬಜೆಟ್ ನಲ್ಲಿ ಏನು ಸಿಗಲಿಲ್ಲ ಮಹಾ ಸಮ್ಮೇಳನದಲ್ಲೂ ಏನು ಸಿಗಲಿಲ್ಲ ಮತ್ತೆ ನಮಗೆ ನಮ್ಮ ಬೇಡಿಕೆಗಳು ಸಿಗೋದು ಯಾವಾಗ ಎಂಬ ಪ್ರಶ್ನೆಯನ್ನು ರಾಜ್ಯದ ಸರ್ಕಾರಿ ನೌಕರರು ಕೇಳು ತ್ತಿದ್ದು ಉತ್ತರಿಸುವವರು ಪದೇ ಪದೇ ಅದನ್ನು ಉತ್ತರಿಸುತ್ತಿದ್ದು
ಗ್ಯಾರಂಟಿ ಯೋಜನೆಗಳ ಅಬ್ಬರದಲ್ಲಿ ನಮ್ಮ ಪ್ರಮುಖ ಬೇಡಿಕೆಗಳಿಗೆ ನೋ ಗ್ಯಾರಂಟಿ ನೋ ಗ್ಯಾರಂಟಿ ಎನ್ನುತ್ತಾ ನಿರಾಶಾರಾಗಿದ್ದಾರೆ ರಾಜ್ಯದ ನೌಕರರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..