ದಾವಣಗೆರೆ –
ಸಾಮಾನ್ಯವಾಗಿ ಯಾವುದೇ ಒಂದು ವಿಚಾರ ಕುರಿತಂತೆ ಸಾರ್ವಜನಿಕರಿಗೆ ಮೊದಲು ಅಧಿಕಾರಿ ಗಳು ತಿಳುವಳಿಕೆಯನ್ನು ಮೂಡಿಸಿ ಜಾಗೃತಿ ಮಾಡ ಬೇಕು ಆದರೆ ದಾವಣಗೆರೆಯಲ್ಲಿ ಮಾತ್ರ ವಿಚಿತ್ರ ವಾಗಿದೆ.ಹೌದು ಜಿಲ್ಲಾ ಪೊಲೀಸ್ ಎಸ್ಪಿ ಹನುಮಂತ ರಾಯ ಸಾರ್ವಜನಿಕರ ಮೇಲೆ ದರ್ಪವನ್ನು ತೋರಿದ್ದಾರೆ.
ನಗರಕ್ಕೆ ಬಂದ ಗ್ರಾಮೀಣ ಪ್ರದೇಶದ ಜನರಿಗೆ ಇನ್ನೂ ಕೂಡಾ ಮಾಸ್ಕ್ ವಿಚಾರದಲ್ಲಿ ತಿಳುವಳಿಕೆ ಜಾಗೃತಿ ಆಗಬೇಕು ಆದರೆ ಎಸ್ಪಿ ಸಾಹೇಬರು ಮಾತ್ರ ಜನ ಸಾಮಾನ್ಯರ ಮೇಲೆ ದರ್ಪವನ್ನು ತೋರಿದ್ದಾರೆ.
ಹೌದು ಇದಕ್ಕೆ ತಾಜಾ ಉದಾಹರಣೆ ನಗರದಲ್ಲಿ ಕಂಡು ಬಂದ ಚಿತ್ರಣ.ಹೌದು ಮಾಸ್ಕ್ ವಿಚಾರದಲ್ಲಿ ಬೆಳ್ಳಂ ಬೆಳಗ್ಗೆ ಫೀಲ್ಡ್ ಗೆ ಇಳಿದ ಡಿಸಿ ಹಾಗೂ ಎಸ್ಪಿ ಅವರು ಕಾರ್ಯಾಚರಣೆ ಮಾಡಿ ಮಾಸ್ಕ್ ಹಾಕದಿರು ವವರಿಗೆ ದಂಡವನ್ನು ಹಾಕಿದರು.ಇನ್ನೂ ಎಸ್ಪಿ ಸಾಹೇ ಬರು ಮಾತ್ರ ಪುಲ್ ಗರಂ ಆಗಿ ಮಾಸ್ಕ್ ಧರಿಸದವ ರಿಗೆ ಎರಡೇಟನ್ನು ಕಪಾಳಿಗೆ ಕೊಟ್ಟರು.
ಮಾರುಕಟ್ಟೆ ಪ್ರದೇಶದಲ್ಲಿಯೇ ವ್ಯಾಪಾರಕ್ಕೆ ಕುಳಿತು ಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಬುದ್ದಿ ಮಾತನ್ನು ಹೇಳು ತ್ತಾ ಹೇಳುತ್ತಾ ಕಪಾಳಿಗೆ ಹೊಡೆದೆ ಬಿಟ್ಟರು.ನಂತರ ಮಾಸ್ಕ್ ನ್ನು ಧರಿಸುವಂತೆ ಹೇಳಿದರು.ದಂಡ ನಿಡದೇ ವಾಗ್ವಾದಕ್ಕೆ ಇಳಿದ ವ್ಯಾಪಾರಿಯ ಕೆನ್ನೆಗೆ ಬಾರಿಸಿದ ಎಸ್ಪಿ ಹನಮಂತರಾಯ ಅವರು ಹೊಡೆದು ಕಳುಹಿಳಿ ಸಿಕೊಟ್ಟರು.
ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್ ಜಾಗೃತಿ ಅಭಿಯಾನದ ವೇಳೆ ಈ ಒಂದು ಘಟನೆ ನಡೆದಿದೆ.ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಫೀಲ್ಡ್ ಗಿಳಿದ ಡಿಸಿ ಎಸ್ಪಿ ಅವರು ಕಾರ್ಯಾಚರಣೆ ಮಾಡಿ ಮಾಸ್ಕ್ ಹಾಕುವ ಕುರಿತಂತೆ ತಿಳುವಳಿಕೆ ಮೂಡಿಸುವಾಗ ಈ ಒಂದು ಎಡವಟ್ಟು ನಡೆದಿದ್ದು ಎಸ್ಪಿ ಅವರ ಈ ಒಂದು ಅಚಾತುರ್ಯಕ್ಕೆ ಸಾರ್ವಜ ನಿಕರು ಅಸಮಾನಧಾನವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.ಇದರೊಂದಿಗೆ ಇನ್ನೂ ಡಿಸಿ ಮಹಾಂತೇಶ್ ಬೀಳಗಿ ಎಸ್ಪಿ ಹನಮಂತರಾಯ, ಪಾಲಿಕೆ ಕಮೀಷನರ್ ವಿಶ್ವನಾಥ್ ಮುದಜ್ಜಿ ಸೇರಿ ದಂತೆ ಹಲವರಿಂದ ಸಾರ್ವಜನಿಕರಿಗೆ ಮಾಸ್ಕ್ ಕುರಿತಂತೆ ಜಾಗೃತಿ ಅಭಿಯಾನ ನಡೆಯಿತು