ಬೆಂಗಳೂರು –
ರಾಜ್ಯ ಸಾರಿಗೆ ನೌಕರರಿಗೆ ಇಲಾಖೆ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಸಾರಿಗೆ ನೌಕರರಿಗೆ ನೀಡಲಾಗುತ್ತಿದ್ದ ದಿನದ ಕರ್ತವ್ಯ ಭತ್ಯೆ ಪಾವತಿಯನ್ನು ಮತ್ತೆ ಆರಂಭಿಸುವಂತೆ ನಾಲ್ಕು ನಿಗಮಗಳಿಗೆ ಸಾರಿಗೆ ಇಲಾಖೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೂಚನೆ ನೀಡಿದೆ.
ನೌಕರರಿಗೆ ನೀಡುತ್ತಿದ್ದ ಭತ್ಯೆಯನ್ನು ಆರ್ಥಿಕ ಸಂಕಷ್ಟದ ಕಾರಣ 10 ತಿಂಗಳಿನಿಂದ ಇದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆರಂಭಿಸಲಾಗುತ್ತಿದ್ದು, ಫೆಬ್ರವರಿ 1 ರಿಂದ ಅನ್ವಯವಾಗುವಂತೆ ಭತ್ಯೆ ನೀಡಲು ಇಲಾಖೆ ಸೂಚನೆ ನೀಡಿದೆ.