ಹೊಸ ತಾಲ್ಲೂಕುಗಳಲ್ಲಿನ BEO ಕಚೇರಿ ಆರಂಭಕ್ಕೆ ಮಾಹಿತಿ ಒದಗಿಸಿ – DDPI ಗೆ ಸೂಚನೆ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಹೊಸದಾಗಿ ಆರಂಭವಾಗಿರುವ ನೂತನ ತಾಲ್ಲೂಕುಗಳಲ್ಲಿ ಬಿಇಓ ಕಚೇರಿ ಆರಂಭ ಕುರಿತಂತೆ ಮಾಹಿತಿಯನ್ನು ಒದಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕೇಳಿದ್ದಾರೆ. ಹೌದು ರಾಜ್ಯದಲ್ಲಿ ಹೊಸದಾಗಿ ಸಾಕಷ್ಟು ಪ್ರಮಾಣ ದಲ್ಲಿ ತಾಲ್ಲೂಕುಗಳು ರಚನೆಯಾಗಿದ್ದು ಇಲ್ಲಿ ಬಿಇಓ ಕಚೇರಿಗಳನ್ನು ಆರಂಭ ಮಾಡುವ ಕುರಿತಂತೆ ಈಗಾಗಲೇ ಸರ್ಕಾರ ಮುಂದಾಗಿದ್ದು ಈ ಕುರಿತಂತೆ ಸಮಗ್ರವಾದ ಮಾಹಿತಿಯನ್ನು ಒದಗಿಸುವಂತೆ ಆದೇಶವನ್ನು ಮಾಡಿದ್ದಾರೆ.

ಹೆಚ್ಚುವರಿ ಇರುವ ಸಿಬ್ಬಂದ್ದಿ ಹಾಗೇ ಇತರೆ ಸಿಬ್ಬಂದಿ ಗಳ ಸೇರಿದಂತೆ ಸಮಗ್ರವಾದ ಮಾಹಿತಿಯನ್ನು ಒದಗಿಸುವಂತೆ ಈ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರದ ಮೂಲಕ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದ್ದು ಈ ಕೂಡಲೇ ಸಮಗ್ರವಾದ ಮಾಹಿತಿಯನ್ನು ಈ ಮೇಲ್ ಮೂಲಕ ತುರ್ತಾಗಿ ನೀಡುವಂತೆ ಸೂಚನೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.