ಗದಗ –
ಗದಗ ನ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಸರ್ಕಾರಿ ಶಾಲೆ ಶಿಕ್ಷಕ ಎಸ್.ಕೆ. ಪಾಟೀಲ್ ಮೇಲೆ ಗಂಭೀರವಾದ ಆರೋಪ ವೊಂದು ಕೇಳಿ ಬಂದಿದೆ.ಹೌದು ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಇವರು ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಡಿಪಿಐ ಅವರು ಈ ಒಂದು ಶಿಕ್ಷಕರ ಮೇಲೆ ಸೂಕ್ತ ಕ್ರಮಕ್ಕೆ ಸೂಚನೆ ಯನ್ನು ನೀಡಿದ್ದಾರೆ.ಗದಗ ಜಿಲ್ಲೆಯ ಶಿರಹಟ್ಟಿ ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಇವರು ತೊಡಗಿ ದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್ ಕೆ ಪಾಟೀಲ್ ಅವರ ಕುರಿತು ವರದಿ ನೀಡಿ ನಂತರ ವಿರುದ್ಧ ಕ್ರಮವನ್ನು ಕೈಗೊಳ್ಳಲು ಡಿಡಿಪಿಐ ಅವರು ತಿಳಿಸಿದ್ದಾರೆ ಈಗಾಗಲೇ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಡಿಡಿಪಿಐ ಅವರು ಬಿಇಓ ಅವರಿಗೆ ಸೂಚನೆ ನೀಡಿದ್ದಾರೆ.ಗದಗ ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ ಅವರು ಸರ್ಕಾರಿ ಶಾಲೆ ಶಿಕ್ಷಕ ಎಸ್.ಕೆ. ಪಾಟೀಲ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದು ವರದಿ ಬಂದ ಕೂಡಲೇ ಕ್ರಮವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.ಹೀಗಾಗಿ ವರದಿ ಏನು ಬರುತ್ತದೆ ಅದರಲ್ಲಿ ಏನಿದೆ ಎಂಬೊಂದನ್ನು ಕಾದು ನೋಡಬೇಕು