ಬೆಂಗಳೂರು –
ಶಾಲೆಗಳಿಗೆ ತಡವಾಗಿ ಬರುತ್ತಿರುವ ಮತ್ತು ಶಾಲಾ ಅವಧಿ ಯಲ್ಲಿ ಅನಧಿಕೃತವಾಗಿ ಗೈರು ಹಾಜರಾಗುವ ಶಿಕ್ಷಕರ ಮೇಲೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗರಂ ಆಗಿದ್ದಾರೆ ಸರ್ಕಾರಿ ಶಾಲೆಯೊಂದಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ದ ಸಚಿವರು ತಡವಾಗಿ ತರಗತಿಗಳಿಗೆ ಬರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಾಗಮಂಗಲ ತಾಲ್ಲೂಕು ನೆಲ್ಲಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಚೆಗೆ ಭೇಟಿ ಕೊಟ್ಟಾಗ ಯಾವ ಶಿಕ್ಷಕರೂ ಶಾಲೆಗೆ ಬಂದಿರಲಿಲ್ಲ.ಮಕ್ಕಳು ಶಾಲಾ ಆವರಣ ದಲ್ಲೇ ಕುಳಿತಿದ್ದರು.ಇಂತಹ ಘಟನೆಗಳು ಶಿಕ್ಷಕರಿಗೆ ಶೋಭೆ ತರುವುದಿಲ್ಲ.ರಾಜ್ಯದ ಯಾವ ಶಾಲೆಗಳಲ್ಲೂ ಇಂತಹ ಘಟನೆಗಳು ಮರುಕಳಿಸಬಾರದು.ಮಕ್ಕಳ ಬೋಧನೆ, ಸುರಕ್ಷತೆಗೆ ಅಡ್ಡಿಯಾಗುವ ಶಿಕ್ಷಕರ ನಡೆ ಕ್ಷಮಿಸಲು ಸಾಧ್ಯ ವಿಲ್ಲ.ಶಿಸ್ತುಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದ್ದಾರೆ.