ಶ್ರೀರಂಗಪಟ್ಟಣ –
ಅಧಿಕಾರ ದುರ್ಬಳಕೆ ಆರೋಪ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನೀಲನಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ. ಹೌದು ಶಾಲೆಗೆ ಬಣ್ಣ ಬಳಿಯಲು ಕಾರ್ಯಾದೇಶ ಇಲ್ಲದಿದ್ದರೂ ಕೆಲಸ ಮಾಡಲು ಗುತ್ತಿಗೆದಾರರಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್ ಅವರಿಗೆ ನೋಟಿಸ್ ನೀಡಲಾಗಿದೆ.
ಶಾಲೆಗೆ ಬಣ್ಣ ಬಡಿಯುವ ವಿಚಾರದಲ್ಲಿ ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್ ಗುತ್ತಿಗೆದಾರನಿಂದ ಕೆಲಸ ಹಂಚಿಕೆ ಆದೇಶ ಪಡೆದಿಲ್ಲ.ಅದರೂ ಶಾಲಾ ಕಟ್ಟಡ ಕ್ಕೆ ಬಣ್ಣ ಬಳಿಯಲು ಅವಕಾಶ ನೀಡಿದ್ದಾರೆ.ಯಾವ ಅನುದಾನದಲ್ಲಿ ಬಣ್ಣ ಬಳಿಯಲಾಗುತ್ತಿದೆ ಎಂಬ ಬಗೆಗೂ ಅವರಲ್ಲಿ ಮಾಹಿತಿ ಇಲ್ಲ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಈ ಒಂದು ಕ್ರಮವನ್ನು ಕೈಗೊ ಳ್ಳಲಾಯಿತು
.
‘ಗುತ್ತಿಗೆದಾರನಿಗೆ ಉಪಯೋಗಿತ ಪ್ರಮಾಣ ಪತ್ರ ನೀಡದಂತೆಯೂ ಮುಖ್ಯ ಶಿಕ್ಷಕಿಗೆ ಸೂಚಿಸಲಾಗಿದೆ. ತಕ್ಷಣ ಕೆಲಸ ನಿಲ್ಲಿಸುವಂತೆ ಗುತ್ತಿಗೆದಾರನಿಗೆ ತಿಳಿಸ ಲಾಗಿದೆ.ಇಲಾಖೆಯ ಗಮನಕ್ಕೆ ತರದೆ,ಕಟ್ಟಡದ ಶಿಥಿ ಲ ಭಾಗವನ್ನು ದುರಸ್ತಿ ಮಾಡದೆ ಬಣ್ಣ ಬಳಿಯುತ್ತಿ ರುವ ಕುರಿತು ಅವರಿಂದಲೂ ಮಾಹಿತಿ ಕೇಳಲಾಗಿದೆ. ಖುದ್ದು ಕಚೇರಿಗೆ ಬಂದು ವಿವರಣೆ ನೀಡುವಂತೆ ಸೂಚಿಸಲಾಗಿದೆ.ಜಿಲ್ಲಾ ಪಂಚಾಯಿತಿ 15ನೇ ಹಣಕಾ ಸು ಯೋಜನೆಯ ಅನುದಾನ ಬಳಸಿಕೊಂಡು ಶಾಲೆ ಯ ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಾರ್ಯಾದೇಶ ಪಡೆಯದೆ ಅನು ದಾನವೂ ಬಿಡುಗಡೆ ಆಗದೆ ಕೆಲಸ ಮಾಡುತ್ತಿರುವು ದು ಅಚ್ಚರಿ ಮೂಡಿಸಿದೆ.ಇನ್ನೂ ತಾಲ್ಲೂಕಿನ ಇತರ ಶಾಲೆಗಳಲ್ಲಿಯೂ ಇಂತಹ ಕೆಲಸ ನಡೆದಿದೆ ಯೇ ಎಂಬ ಬಗ್ಗೆ ಪರಿಶೀಲನೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ