ಗದಗ –
ಗದಗ ಜಿಲ್ಲೆಯ ನಾಗಾವಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ನೋಟೀಸ್ ನೀಡಲಾಗಿದೆ ಹೌದು ಶಾಲೆಯಲ್ಲಿ ವಿದ್ಯಾರ್ಥಿ ಗಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಈ ವಿಡಿಯೋವನ್ನು ಶಾಲೆಯಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕಿ ವಿಜಯಲಕ್ಷ್ಮಿ ಚಲವಾದಿ ಎಂಬವರು ಚಿತ್ರೀಕರಿಸಿ ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡ ಆರೋಪ ಕೇಳಿ ಬಂದಿದೆ.ವಿಡಿಯೊ ವೈರಲ್ ಆದ ಬೆನ್ನಲ್ಲೇ ನೋಟೀಸ್ ನೀಡಲಾಗಿದೆ.ಇನ್ನೂ ಈ ಕುರಿತು ಶಾಲೆಯ ಮುಖ್ಯಶಿಕ್ಷಕ ಕೆ.ಸಿ.ನಭಾಪುರ ಜುಲೈ 21ರಂದು ನಾನು ಶಾಲೆಯಲ್ಲಿ ಇರಲಿಲ್ಲ.ನಂತರ ಈ ವಿಷಯ ತಿಳಿದಿದೆ.ಅಡುಗೆ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ.
ಇನ್ನೂ ಈ ಒಂದು ಘಟನೆ ನಡೆದ ಬೆನ್ನಲ್ಲೇ ಜುಲೈ 22 ರಂದು ಜಿಪಂ ಸಿಇಒ ಭೇಟಿ ನೀಡಿ ವೀಡಿಯೋದಲ್ಲಿ ಕಂಡು ಬರುವ ವಿದ್ಯಾರ್ಥಿಗಳು ಹಾಗೂ ಶೌಚಾಲಯ ಸ್ವಚ್ಛಗೊಳಿ ಸಲು ಸೂಚನೆ ನೀಡಿದ ಶಿಕ್ಷಕರೊಂದಿಗೆ ಸಂವಾದ ನಡೆಸಿ ದ್ದಾರೆ ಸಿಇಒ ಅವರ ಸೂಚನೆ ಮೇರೆಗೆ ಶಿಕ್ಷಕರಿಗೆನೋಟಿಸ್ ನೀಡಲಾಗಿದೆ.
ಕೆಲವರು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ವೈರಲ್ ಆಗಿದೆ.ಇದೀಗ ಅಡುಗೆ ಸಹಾಯಕಿ ವಿಜಯಲಕ್ಷ್ಮಿ ಅವರು ಶಾಲೆಯ ಶಿಕ್ಷಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.ಜುಲೈ 21ರಂದು ಈ ಘಟನೆ ನಡೆದಿದ್ದು ಮಕ್ಕಳನ್ನ ಈ ಕೆಲಸಕ್ಕೆ ಕಳುಹಿಸಿದ ಶಿಕ್ಷಕರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದೆ.
ಈ ಘಟನೆ ಕುರಿತು ಮಾತನಾಡಿರುವ ವಿಜಯಲಕ್ಷ್ಮಿ ಚಲವಾದಿ ಅಂದು ಮಕ್ಕಳು ನನ್ನ ಬಳಿಗೆ ಬಂದು ಬಕೆಟ್ ಮತ್ತು ಪೊರಕೆಯನ್ನು ಕೇಳಿದರು ನಾನು ಯಾಕೆ ಅಂತ ಕೇಳಿದಾಗ ಶೌಚಾಲಯ ತೊಳೆಯಲು ಅಂತ ಹೇಳಿದರು ಎಂದಿದ್ದಾರೆ