ವಿಜಯಪುರ –
ಹೌದು ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಧಿಡೀರ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಕಚೇರಿಗೆ ತಡವಾಗಿ ಹಾಜರಾದ 10 ಜನ ಸಿಬ್ಬಂದಿಗೆ ನೋಟಿಸ್ ನೀಡಲು ಸೂಚಿಸಿದರು.ಕಚೇರಿ ಸಮಯಕ್ಕೆ ಹಾಜರಾದ ತಕ್ಷಣ ಹಾಗೂ ಕಚೇರಿ ಬಿಡುವ ಸಂದರ್ಭದಲ್ಲಿ ಹಾಜರಾತಿ ಪುಸ್ತಕದಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಸಹಿ ಮಾಡಲು ಕಾರ್ಯಾಲಯದ ಅಧೀಕ್ಷಕರಿಗೆ ಸೂಚಿಸಿದರು.ಇದೇ ವೇಳೆ ಇಲಾಖೆಗೆ ಸಂಬಂಧಿಸಿದ ನೇಮಕಾತಿ ಮಾಹಿತಿ ಪಡೆದರು. ಕಚೇರಿಯ ಹೊರಗಡೆ ಇರುವ ಹೊಸ ಅಂಬುಲೆನ್ಸ್‌ಗಳನ್ನು ಕೂಡಲೇ ಸಂಬಂಧಪಟ್ಟ ತಾಲ್ಲೂಕುಗಳಿಗೆ ಹಸ್ತಾಂತರಿಸಲು ತಿಳಿಸಿದರು.

ಬಳಿಕ ಮಲೇರಿಯಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ವಚ್ಚತೆ ಕಾಪಾಡಲು ಹಾಗೂ ಕಚೇರಿಗೆ ಬರುವ ಸಾರ್ವಜ ನಿಕರಿಗೆ ತಿಳಿಯುವ ಹಾಗೆ ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಕುಮಾರ್ ಯರಗಲ್ ರಜೆಯಲ್ಲಿ ಇದ್ದರು.ಡಾ. ಕೆ. ಎಂ. ಗುಂಡಬಾವಡಿ ಡಾ. ಕವಿತಾ ದೊಡಮನಿ,ಸಿಬ್ಬಂದಿ ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಇದ್ದರು.