ಬೆಂಗಳೂರು –
ರಾಜ್ಯದಲ್ಲಿ ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಅಡುಗೆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 60 ವರ್ಷ ಮೇಲ್ಪಟ್ಟ ಅಡುಗೆ ಸಿಬ್ಬಂದಿ ಯನ್ನು ಕಡ್ಡಾಯವಾಗಿ ಕೆಲಸದಿಂದ ಬಿಡುಗಡೆಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಅಂದರೆ 2003-04 ರಿಂದ ಇಲ್ಲಿಯವರೆಗೂ ವಯೋಮಾನ 60 ಮೀರಿದ್ದರೂ ಆರೋಗ್ಯವಂತರಾಗಿರುವ ಅಡುಗೆ ಸಿಬ್ಬಂದಿ ಯನ್ನು ಮಾನವೀಯತೆ ದೃಷ್ಟಿಯಿಂದ ಕೆಲಸದಲ್ಲಿ ಮುಂದುವರಿಸಿ ಕೊಂಡು ಬರಲಾಗಿತ್ತು.ಆದರೆ ಇದೇ ವರ್ಷ ಪ್ರಥಮ ಬಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿ 60 ವರ್ಷ ಪೂರ್ಣಗೊಳಿಸಿದವರನ್ನು ಕಡ್ಡಾಯವಾಗಿ ಅಡುಗೆ ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿದೆ.
ಇಲಾಖೆಯ ಈ ಕ್ರಮದಿಂದ ಅಂದಾಜು ಮೂರು ಸಾವಿರ ಮಂದಿ ಕೆಲಸ ಬಿಡಬೇಕಾಗಿದೆ.ಹಲವು ವರ್ಷ ಕೇವಲ ಗೌರವ ಸಂಭಾವನೆಯಲ್ಲೇ ಕೆಲಸ ಮಾಡಿದ್ದ ಇವರು ಯಾವುದೇ ನಿವೃತ್ತಿ ಸೌಲಭ್ಯವಿಲ್ಲದೇ ಕೆಲಸ ಬಿಡುವಂತಾ ಗಿದೆ.2022ರ ಮಾ.31ಕ್ಕೆ 60 ವರ್ಷ ಪೂರ್ಣಗೊಳಿಸಿರುವ ಅಡುಗೆ ಸಿಬಂದಿಯನ್ನು ವಯೋಸಹಜ ಕಾರಣ ಹಾಗೂ ಇತರ ಇಲಾಖೆಗಳಲ್ಲಿ ಗೌರವ ಸಂಭಾವನೆ ಪಡೆಯುತ್ತಿರುವ ವರನ್ನು 60 ವರ್ಷಕ್ಕೆ ಕೈಬಿಡುವ ಪದ್ಧತಿಯಂತೆ ಕರ್ತವ್ಯ ದಿಂದ ಕೈಬಿಡಲು ಕ್ರಮ ಕೈಗೊಳ್ಳಬೇಕು. ಸೂಕ್ತ ದಾಖಲೆ, ವೈದ್ಯಕೀಯ ದೃಢೀಕರಣದ ವಿಧಾನದ ಮೂಲಕ ಪ್ರಸಕ್ತ ಮಾ.31ಕ್ಕೆ 60 ವರ್ಷ ತುಂಬಿರುವುದನ್ನು ಖಾತ್ರಿಪಡಿಸಿ ಕೊಳ್ಳಬೇಕು ಎಂದು ಇಲಾಖೆ ಆಯುಕ್ತರು ಎಲ್ಲ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶಿಸಿದ್ದಾರೆ.ಪ್ರಸಕ್ತ ಶೈಕ್ಷಣಿಕ ವರ್ಷ ದಲ್ಲಿ ಏಪ್ರಿಲ್ 1ರಿಂದ ಪ್ರಾರಂಭಿಸಿ ಮುಂದಿನ ಯಾವುದೇ ತಿಂಗಳಲ್ಲಿ ಅಡುಗೆ ಸಿಬಂದಿಗೆ 60 ವರ್ಷ ವಯಸ್ಸು ತುಂಬಿ ದರೆ ಅದೇ ತಿಂಗಳ ಅಂತಿಮ ದಿನಾಂಕದಂದೇ ಅವರನ್ನು ಮುಕ್ತಗೊಳಿಸಬೇಕು.ಜೊತೆಗೆ 60 ವರ್ಷ ತುಂಬದಿದ್ದರೂ ಅನಾರೋಗ್ಯ ಹಾಗೂ ಇತರ ಕಾರಣದಿಂದ ಅಡುಗೆ ಕೆಲಸದಲ್ಲಿ ಮುಂದುವರಿಯಲು ಇಚ್ಛಿಸದಿದ್ದಲ್ಲಿ ಅವರಿಂದ ಲಿಖಿತ ಪತ್ರ ಪಡೆದು ಸೇವೆಯಿಂದ ಮುಕ್ತಗೊಳಿಸಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.