ಹುಬ್ಬಳ್ಳಿ –
ಕೇಂದ್ರ ಸರಕಾರ ಜಾರಿಮಾಡಲಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ನವಂಬರ್ 26 ರಂದು ದೇಶವ್ಯಾಪಿ ಮುಷ್ಕರಕ್ಕೇ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಇಂದು ನಡೆದ ಸಮಾವೇಶದಲ್ಲಿ ಈ ಒಂದು ತೀರ್ಮಾಣವನ್ನು ಕೈಗೊಳ್ಳಲಾಯಿತು.ಭೂ ಸುಧಾರಣಾ ಕಾಯ್ದೆ , ಕೃಷಿ ಸಂಬಂಧಿತ ಕಾನೂನು ತಿದ್ದುಪಡಿಗಳನ್ನು ಕೈಬಿಡಲು ಹಾಗೂ ಸಾರ್ವಜನಿಕ ಉದ್ಯಿಮೆಗಳ ಖಾಸಗೀಕರಣವನ್ನು ತಡೆಯಲು ಒತ್ತಾಯಿಸಿ ಮತ್ತು ಪರಿಹಾರ ಪರ್ಯಾಯಕ್ಕಾಗಿ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನವೆಂಬರ್-26 ರಂದು ದೇಶವ್ಯಾಪಿ ಮುಷ್ಕರಕ್ಕೇ ಕರೆ ನೀಡಿವೆ ಈ ಕುರಿತಂತೆ ಪೂರ್ವಭಾವಿಯಾಗಿ ನಗರದ ಅಕ್ಕನ ಬಳಗದಲ್ಲಿ ಸಮಾವೇಶವನ್ನು ಮಾಡಲಾಯಿತು.
ಈ ಹಿನ್ನಲೆಯಲ್ಲಿ ಸರಕಾರದ ಜನವಿರೋಧಿ ಈ ನೀತಿಗಳ ವಿರುದ್ದ ದೇಶದಾಧ್ಯಂತ ರೈತ ಕಾರ್ಮಿಕರ ಸಂಘಟಿತ ಐಕ್ಯಚಳುವಳಿಯನ್ನು ತೀವ್ರಗೊಳಿಸಲಾಗುತ್ತಿದ್ದು ಅದರ ಭಾಗವಾಗಿ ನವೆಂಬರ್-26 ರಂದು ದೇಶದಾಧ್ಯಂತ ಕಾರ್ಮಿಕರ ಮುಷ್ಕರ ನಡೆಯಲಿದ್ದು ಯಶಸ್ವಿಗೊಳಿಸಲು ಕಾರ್ಮಿಕರು ಸಜ್ಜಾಗಬೇಕೆಂದು ಸಿಐಟಿಯು ಮುಖಂಡ ಮಹೇಶ ಪತ್ತಾರ ಮಾತನಾಡಿ ಕರೆ ನೀಡಿದರು.
ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಬಿ.ಎಸ್.ಸೊಪ್ಪಿನ (ಕೆಪಿಆರ್ಎ ಸ್), ಗಂಗಾಧರ ಬಡಿಗೇರ (ಎಐಯುಟಿಯುಸಿ) ಅಶೋಕ ಬಾರ್ಕಿ, (ಟಿಯುಸಿಸಿ) ಬಾಲಕೃಷ್ಣ (ಬ್ಯಾಂಕ), ಬಿ.ಎನ್.ಪೂಜಾರಿ (ವಿಮೆ) ಡಾ. ವಿಜಯ ಗುಂಟ್ರಾಳ (ಪೌರ ಕಾರ್ಮಿಕರ ಸಂಘಟನೆ) ಜಿ,ಎಂ.ವೈಧ್ಯ (ಗ್ರಾಮೀಣ ಬ್ಯಾಂಕ್) ಬಿ.ಐ.ಈಳಿಗೇರ (ಸಿಐಟಿಯು) ಬಸೀರ ಮುಧೋಳ, ಎ.ಎಸ್.ಪೀರಜಾದೆ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಲಲಿತಾ ಹಿರೇಮಠ, ಭುವನಾ, ಅಂಜನಾ ಬಡಿಗೇರ, ಮಂಜು ದೊಡ್ಡಮನಿ, ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಎಂ.ಎಚ್. ಮುಲ್ಲಾ, ರಮೇಶ ಭೂಸ್ಲೆ ಹಾಗೂ ಬಿಸಿಯೂಟ, ಕಟ್ಟಡ, ಹಮಾಲಿ, ಆಶಾ, ಅಂಗನವಾಡಿ, ಹಾಸ್ಟೇಲ್, ಬ್ಯಾಂಕ, ವಿಮಾ, ಸಾರಿಗೆ, ಅಟೋ ಚಾಲಕರ ಸಂಘಗಳ ಮುಖಂಡರು ಭಾಗವಹಿಸಿದ್ದರು.ಇದೇ ವೇಳೆ ಇತ್ತಿಚಿಗೆ ನಿಧನರಾದ ಇತ್ತೀಚಿಗೆ ರೈತ ಮುಖಂಡ ಮಾರುತಿ ಮಾನ್ಪಡೆ, ಕಾರ್ಮಿಕ ಮುಖಂಡ ಎನ್.ಎ.ಖಾಜಿ, ಜಾನಪದ ವಿದ್ವಾಂಸ ಡಾ. ಟಿ.ಬಿ.ಸೊಲಬಕ್ಕನವರಿಗೆ ಸಮಾವೇಶದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.