ಬೆಂಗಳೂರು –
ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಸಾಲು ಸಾಲಾಗಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿ ದ್ದಾರೆ ಈ ಒಂದು ವಿಚಾರ ಎಲ್ಲರಿಗೂ ತಿಳಿದ ಗೊತ್ತಿ ರುವ ವಿಚಾರ.ಆದರೆ ಶಿಕ್ಷಕರು ಅದರಲ್ಲೂ ಈ ಹಿಂದೆ ಸೋಂಕು ಕಾಣಿಸಿಕೊಂಡ ನಂತರ ಮತ್ತೆ ರಾಜ್ಯದ ಲ್ಲಿನ ಉಪಚುನಾವಣೆಯ ಕರ್ತವ್ಯ ಮಾಡಿದ ಶಿಕ್ಷಕ ರಿಗೆ ಸೋಂಕು ಕಾಣಸಿಕೊಂಡು ಸರಿಯಾಗಿ ಚಿಕಿತ್ಸೆ ಸಿಗದೇ ಸಿಕ್ಕರೂ ಚಿಕಿತ್ಸೆಗೆ ಸ್ಪಂದಿಸದೇ ಮೃತ ರಾಗಿ ದ್ದಾರೆ.ಇಷ್ಟೊಂದು ಶಿಕ್ಷಕರು ರಾಜ್ಯದಲ್ಲಿ ಮೃತರಾಗಿದ್ದ ರೂ ಕೂಡಾ ಈಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಜ್ಞಾನೋದಯ ಆಗಿದೆ

ಹೌದು ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಮೃತರಾ ಗಿದ್ದು ಈಗಲೂ ಆಗುತ್ತಿದ್ದಾರೆ ಸಾಲು ಸಾಲಾಗಿ ರಾಜ್ಯ ದಲ್ಲಿ ಶಿಕ್ಷಕ ಬಂಧುಗಳು ನಿಧನರಾಗುತ್ತಿದ್ದರೂ ಈವ ರೆಗೆ ಸೌಜನ್ಯಕ್ಕಾದರೂ ಚಿಕಿತ್ಸೆಗೆ ಏನಾದರೂ ವ್ಯವಸ್ಥೆ ಯನ್ನು ಮಾಡದೇ ಇಲ್ಲವೇ ಯಾವುದೇ ಪ್ರತ್ಯೇಕ ವಾದ ಸೌಲಭ್ಯಗಳನ್ನು ಕೊಡಿಸದೇ ಇಲ್ಲವೇ ಏನೇ ಲ್ಲಾ ಸಣ್ಣ ಪುಟ್ಟ ವಿಚಾರಗಳನ್ನು ಫೇಸ್ ಬುಕ್ ಗೆ ಇಲ್ಲವೇ ಟ್ವೀಟರ್ ಗೆ ಪೊಸ್ಟ್ ಮಾಡುವ ಶಿಕ್ಷಣ ಸಚಿ ವರಿಗೆ ರಾಜ್ಯದಲ್ಲಿ ಮೃತರಾಗಿರುವ ನೂರಾರು ಶಿಕ್ಷಕ ರು ಕಾಣಲಿಲ್ಲವೇ ಕೇಳಲಿಲ್ಲವೇ ಯಾಕೇ ಸಾರ್ ಹೀಗೆ ಮಾಡಿದರಿ.ತಾವೊಬ್ಬರು ಶಿಕ್ಷಕಿಯೊಬ್ಬರ ಮಗ ನಾಗಿದ್ದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ನಿಧನರಾಗಿದ್ದರು ಕೂಡಾ ಈವರೆಗೆ ಸ್ಪಂದಿಸದಿರೊ ದು ತುಂಬಾ ತುಂಬಾ ನೋವಿನ ವಿಚಾರ. ಈಗ ಎಚ್ಚೆ ತ್ತುಕೊಂಡು ಮೃತ ಶಿಕ್ಷಕರ ಕುರಿತಂತೆ ಮಾಹಿತಿಯ ನ್ನು ಕೇಳಿದ್ದಾರೆ.

ಈವರೆಗೆ ಮೌನವಾಗಿದ್ದ ಸಚಿವರು ಈಗ ತುಟಿ ಬಿಚ್ಚಿ ದ್ದು ಜ್ಞಾನೋದಯವಾದಂತೆ ಕಾಣುತ್ತಿದ್ದು ಕೋವಿಡ್ ಕಾರ್ಯದಲ್ಲಿ ನಿರತರಾದ ಹಾಗೂ ಉಪಚುನಾವಣೆ ಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಸಾವನ್ನಪ್ಪಿ ದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಗಂಭೀರ ವಾಗಿ ಪರಿಗಣಿಸಿದ್ದು ಕೂಡಲೇ ಶಿಕ್ಷಕವಾರು ವರದಿ ಯನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇ ಶನ ನೀಡಿದ್ದಾರೆ.

ಕಳೆದ ಏಪ್ರಿಲ್ 2021ರಿಂದ ಇಲ್ಲಿ ಯವರೆಗೆ ಕೋವಿ ಡ್ ಕಾರಣದಿಂದ ಮೃತಪಟ್ಟ ಶಿಕ್ಷ ಕರು ಹಾಗೂ ಉಪನ್ಯಾಸಕರ ವಯೋಮಾನ ಸಹಿ ತವಾಗಿ ಮೃತಪಟ್ಟ ಖಚಿತ ಕಾರಣಗಳೊಂದಿಗೆ ಅತಿ ಶೀಘ್ರ ದಲ್ಲೇ ತಮಗೆ ವರದಿ ಮಂಡಿಸಬೇಕೆಂದು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿ ಪೂರ್ವ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ ಸಚಿವರು ಇದು ದುರದೃಷ್ಟಕರವಾದ ಸಂಗತಿಯಾಗಿದ್ದು ಶಿಕ್ಷಕರ ಕುಟುಂಬಗಳ ಬಗ್ಗೆ ತಮ್ಮ ತೀವ್ರವಾದ ಸಂತಾಪವಿದೆ ಎಂದಿದ್ದು ಈಗಲಾದರೂ ಸ್ಪಂದಿಸಿದ ಸಚಿವರು ಹೀಗೆ ಯಾಕೇ ಮಾಡಿದರು ಎಂಬ ಪ್ರಶ್ನೆಗೆ ಅವರೇ ಉತ್ತರಿ ಸಬೇಕು