NPS ನೌಕರ ಶಿಕ್ಷಕ ಆತ್ಮಹತ್ಯೆ ಪಿಂಚಣಿಗಾಗಿ ರಾಯಚೂರಿನಿಂದ ಬೆಂಗಳೂರಿಗೆ ಹೋರಾಟಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ ಅನಾಥವಾಯಿತು ಕುಟುಂಬ

Suddi Sante Desk
NPS ನೌಕರ ಶಿಕ್ಷಕ ಆತ್ಮಹತ್ಯೆ ಪಿಂಚಣಿಗಾಗಿ ರಾಯಚೂರಿನಿಂದ ಬೆಂಗಳೂರಿಗೆ ಹೋರಾಟಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ ಅನಾಥವಾಯಿತು ಕುಟುಂಬ

ಬೆಂಗಳೂರು

ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸಿ ಹಳೆ ಪಿಂಚಣಿ ಮರು ಜಾರಿಗೆ ಒತ್ತಾಯಿಸಿ ಬೆಂಗಳೂರಿ ನಲ್ಲಿ ನಡೆಯುತ್ತಿರುವ  ಅನುದಾನಿತ ಶಾಲಾ ಶಿಕ್ಷಕರ ಪ್ರತಿಭಟನೆ ಮುಂದುವರೆದಿದೆ.ಹೌದು ಪಿಂಚಣಿಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನೆಗೆ ರಾಯಚೂರು ನಿಂದ ಬಂದಿದ್ದ ಶಿಕ್ಷಕರೊಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಂಕರಪ್ಪ ಬೋರಡ್ಡಿ (47) ಮೃತ  ದುರ್ದೈವಿ ನೌಕರನಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿ ಯಾಗಿದ್ದು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಅನುದಾನಿತ ಶಾಲೆಯಲ್ಲಿ ಗಣಿತ ಶಿಕ್ಷಕ ರಾಗಿದ್ದಾರೆ.

ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾ ಗಲು ರಾಯಚೂರಿನಿಂದ ಬೆಂಗಳೂರಿಗೆ ಬಂದಿ ದ್ದರು.ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಅನಿರ್ದಿಷ್ಟ ವಾದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

ಪ್ರತಿಭಟನೆ ಮುಗಿದ ಬಳಿಕ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಬಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಶಿಕ್ಷಕನ ಕುಟುಂಬದವರು ಬರುವ ಮುನ್ನವೆ ಪೊಲೀಸರೇ ಮರುಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಆಂಬು ಲೆನ್ಸ್ ನಲ್ ಮೃತದೇಹವನ್ನು ಕಳುಹಿಸಲಾಯಿತು. ಮೃತ ಶಿಕ್ಷಕನ ಕುಟುಂಬಸ್ಥರು ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಆಂಬ್ಯು ಲೆನ್ಸ್ ನಲ್ ಮೃತ ದೇಹವನ್ನು ತೆಗೆದುಕೊಂಡು ಬಂದಿದ್ದರು. ಆಂಬ್ಯು ಲೆನ್ಸ್ ನ್ನು ಗೇಟ್ನಲ್ಲಿಯೇ ಪೊಲೀಸರು ತಡೆ ಹಿಡಿದಿ ದ್ದಕ್ಕೆ ಪೊಲೀಸರೊಂದಿಗೆ ಕುಟುಂಬಸ್ಥರ ವಾಗ್ವಾದ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕನ ಕುಟುಂ ಬಕ್ಕೆ ನೌಕರಿ ಸೂಕ್ತ ಪರಿಹಾರ ಕೊಡಬೇಕೆಂದು ಸರ್ಕಾರಕ್ಕೆ ಮಾಜಿ ಸಚಿವ ಎಸ್ ಆರ್ ಪಾಟೀಲ ಒತ್ತಾಯವನ್ನು ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.