ಹುಬ್ಬಳ್ಳಿ –
ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ಮಣಿಕಂಠ ಶ್ಯಾಗೋಟಿಯವರ ಪ್ರವಾಸ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಅಭಿವೃದ್ದಿ ಕಾರ್ಯಕ್ರಮಗಳನ್ನು ತಿಳಿಸುತ್ತಾ ಎಸ್ ಟಿ ಸಮಾವೇಶ ಯಶಸ್ಸಿಗೆ ಟೀಮ್ ಕಟ್ಟಿಕೊಂಡು ಸುತ್ತಾಡುತ್ತಿರುವ ಯುವ ನಾಯಕ…..
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಏಪ್ರೀಲ್ 13 ರಂದು ಹುಬ್ಬಳ್ಳಿಯಲ್ಲಿ ಎಸ್ ಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಯವರು ಈ ಒಂದು ಸಮಾವೇಶವನ್ನು ಆಯೋಜನೆ ಮಾಡಿದ್ದು ಹೀಗಾಗಿ ಈ ಒಂದು ಸಮಾವೇಶದ ಕುರಿತಂತೆ ರಾಜ್ಯ ಎಸ್ ಟಿ ಮೋರ್ಚಾ ಘಟಕದ ಖಜಾಂಚಿಯಾಗಿರುವ ಮಣಿಕಂಠ ಶ್ಯಾಗೋಟಿ ಯವರು ನಿರಂತರವಾಗಿ ಸಭೆಗಳನ್ನು ಮಾಡುತ್ತಿದ್ದಾರೆ.
ಸಮಾವೇಶ ಕುರಿತಂತೆ ಜಿಲ್ಲೆಯಲ್ಲಿನ ಎಸ್ ಟಿ ಸಮಾಜಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಮಾಡಿರುವ ಕೆಲಸ ಕಾರ್ಯಗಳನ್ನು ತಿಳಿಸುತ್ತಾ ಪುಸ್ತಿಕೆಗಳನ್ನು ನೀಡುತ್ತಾ ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಸಗಳನ್ನು ಮಾಡುತ್ತಿದ್ದಾರೆ
ಜಿಲ್ಲೆಯಲ್ಲಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿನ ಪ್ರಮುಖವಾದ ಗ್ರಾಮಗಳಿಗೆ ತೆರಳಿ ಮೊದಲು ಎಸ್ ಟಿ ಸಮಾಜಕ್ಕೆ ಕೇಂದ್ರ ಸರ್ಕಾರವು ಅದರಲ್ಲೂ ಪ್ರಹ್ಲಾದ್ ಜೋಶಿಯ ವರು ಮಾಡಿರುವ ಕೆಲಸ ಕಾರ್ಯಗಳನ್ನು ತಿಳಿಸು ತ್ತಿದ್ದಾರೆ.ಅಲ್ಲದೇ ಸಮಾವೇಶಕ್ಕೆ ಆಗಮಿಸಿ ಯಶಶ್ವಿಗೊಳಿಸುವಂತೆ ಹೇಳುತ್ತಿದ್ದಾರೆ.ಹೀಗಾಗಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಇಟಿಗಟ್ಟಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರ ಸಭೆಯನ್ನು ಮಾಡಲಾಯಿತು
ಏಪ್ರೀಲ್ 13 ರಂದು ನಡೆಯುವ ಎಸ್ ಟಿ ಸಮಾಜದ ಸಮಾವೇಶ ಮಾಡುವದರ ಕುರಿತು ಮಾಹಿತಿ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಬರು ವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಪುಂಡಲೀಕ ತಳವಾರ್, ರಾಜ್ಯ ಎಸ್ ಟಿ ಮೋರ್ಚಾ ಖಜಾಂಚಿಯಾದ ಮಣಿಕಂಠ ಶ್ಯಾಗೋಟಿ,
ನಿಗಮ ಮಂಡಳಿಯ ನಿರ್ದೇಶಕರಾದ ರವಿ ಬೆಂತೂರು,ಶೇಖಣ್ಣ ನವಲೂರು,ಮಂಜು ಪೂಜಾರ,ಚನ್ನಬಸಪ್ಪ ನವಲೂರು,ತುಕಾರಾಂ ಪೂಜಾರ,ನಾಗಪ್ಪ ರೋಡಿಹಾಳ,ಪ್ರಕಾಶ್ ಗುರುಂಕೋಳ,ಸಿದ್ದಪ್ಪ ವಾಲೀಕಾರ್, ರಮೇಶ್ ಪೂಜಾರ,ಸೋಮಪ್ಪ,ಪ್ರಕಾಶ್ ಗಾಯಕೊಡ ಹಾಗೂ ಸಮಾಜದ ಮುಖಂಡರು ಬಾಗವಹಿಸಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..