ಮಲಪ್ರಭಾ ನದಿಗೆ ಬಾಗಿನ ಅರ್ಪಣೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ,ಶಾಸಕರಾದ NH ಕೋನರೆಡ್ಡಿ,ವಿಶ್ವಾಸ ವೈದ್ಯ ರಿಂದ ಆಣೆಕಟ್ಟಿಗೆ ಪೂಜೆ ಸಲ್ಲಿಕೆ ಬಾಗಿನ ಅರ್ಪಣೆ…..

Suddi Sante Desk
ಮಲಪ್ರಭಾ ನದಿಗೆ ಬಾಗಿನ ಅರ್ಪಣೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ,ಶಾಸಕರಾದ NH ಕೋನರೆಡ್ಡಿ,ವಿಶ್ವಾಸ ವೈದ್ಯ ರಿಂದ ಆಣೆಕಟ್ಟಿಗೆ ಪೂಜೆ ಸಲ್ಲಿಕೆ ಬಾಗಿನ ಅರ್ಪಣೆ…..

ಸವದತ್ತಿ

ಮಲಪ್ರಭಾ ನದಿಗೆ ಬಾಗಿನ ಅರ್ಪಣೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ,ಶಾಸಕರಾದ NH ಕೋನರೆಡ್ಡಿ,ವಿಶ್ವಾಸ ವೈದ್ಯ ರಿಂದ ಆಣೆಕಟ್ಟಿಗೆ ಪೂಜೆ ಸಲ್ಲಿಕೆ ಬಾಗಿನ ಅರ್ಪಣೆ…..

ಉತ್ತರ ಕರ್ನಾಟಕ ರೈತರ ಜೀವನದಿ ಮಲಪ್ರಭಾ ಜಲಾಶಯ ಭರ್ತಿಯಾಗಿದೆ.ಈ ಒಂದು ಹಿನ್ನಲೆಯಲ್ಲಿ ಶುಭ ಸಂದರ್ಭದಲ್ಲಿ ಆಣೆಕಟ್ಟಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ ಬಾಗಿನವನ್ನು ಅರ್ಪಣೆ ಮಾಡಲಾಯಿತು.ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ವಿಶೇಷ ಚೇತನರ ಮತ್ತು ಹಿರಿಯರ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರ ಅಧ್ಯಕ್ಷತೆಯಲ್ಲಿ ಸವದತ್ತಿ ತಾಲೂಕಿನ ಮಲಪ್ರಭಾ ರೇಣುಕಾಸಾಗರ‌ ಇಂದಿರಾಗಾಂಧಿ ಆಣೆಕಟ್ಟಿಗೆ ಪೂಜೆಯನ್ನು ಸಲ್ಲಿಸಿ ಬಾಗಿನವನ್ನು ಅರ್ಪಿಸಲಾಯಿತು.

ಈ ವರ್ಷ ವರುಣನ ಕೃಪೆಯಿಂದ ನದಿ ಮೈದುಂಬಿ ಹರಿಯುತ್ತಿದ್ದು ರೈತರು ಖುಷಿಯಲ್ಲಿದ್ದಾರೆ.ಈ ಶುಭ ಸಂದರ್ಭದಲ್ಲಿ ತಾಯಿ ಮಲಪ್ರಭೆ ರೈತರ ಎಲ್ಲ ಕನಸುಗಳನ್ನು ನನಸಾಗಲೆಂದು ಪ್ರಾರ್ಥನೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೊಂದಿಗೆ,ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎನ್ ಹೆಚ್ ಕೋನರೆಡ್ಡಿ,

ಸವದತ್ತಿ ಕ್ಷೇತ್ರದ ಶಾಸಕರಾದ ವಿಶ್ವಾಸ ವೈಧ್ಯ,ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬದಾಮಿ ಕ್ಷೇತ್ರದ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಮುಖ್ಯ ಇಂಜಿನಿಯರ್ ಎ.ಎಲ್ ವಾಸನದ, ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಸದಾಶಿವಗೌಡ ಪಾಟೀಲ, ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿ.ಎಸ್ ಮಧುಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಸವದತ್ತಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.