ಕೊಪ್ಪಳ –
ಲೋಕಾಯುಕ್ತ ಅಧಿಕಾರಿಗಳ ಭಯದಿಂದಾಗಿ ಅಧಿಕಾರಿಯೊಬ್ಬರು ಹಣವನ್ನು ನುಂಗಿದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಹೌದು ದಾಳಿ ವೇಳೆ ಭಯದಿಂದ ಹಣ ನುಂಗಿದ ಅಧಿಕಾರಿ ಸಾಕ್ಷಿಗಾಗಿ ಲೋಕಾಯುಕ್ತ ಆಫೀಸರ್ಗಳ ನಡೆ ಮಾತ್ರ ರೋಚಕ ಜಿಲ್ಲಾ ಸಹಕಾರಿ ಇಲಾಖೆ ಉಪ ನಿಬಂಧಕ ದಸ್ತಗಿರ ಅಲಿ ಎಂಬ ಅಧಿಕಾರಿ ಲಂಚ ಪಡೆವಾಗ ಸಿಕ್ಕಿ ಬಿದ್ದಿದ್ದಾರೆ
ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದರು ಈ ವೇಳೆ ಗಾಬರಿ ಬಿದ್ದ ಅಧಿಕಾರಿ ಲಂಚದ ಹಣ ನುಂಗಿ ಪೇಚಿಗೆ ಸಿಲುಕಿದರು ಭೀಮನಗೌಡ ಎಂಬುವರು ಸಂಘ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು ಅದಕ್ಕೆ ಎರಡು ಸಾವಿರ ರೂ. ಲಂಚ ನೀಡುವಂತೆ ದಸ್ತಗಿರ ಅಲಿ ಬೇಡಿಕೆ ಇಟ್ಟಿದ್ದ.
ಈ ಬಗ್ಗೆ ಭೀಮನಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಜಿಲ್ಲಾಡಳಿತ ಭವನದ ಸಹಕಾರಿ ಇಲಾಖೆ ಕಚೇರಿಯಲ್ಲಿಯೇ ಹಣ ಪಡೆಯುವಾಗ ದಾಳಿ ನಡೆಸಿದ್ದಾರೆ.ದಿಢೀರ್ ದಾಳಿಯಿಂದ ಬೆದರಿದ ಅಧಿಕಾರಿ ಲಂಚದ ಹಣವನ್ನು ಬಾಯಿಯೊಳಗೆ ಹಾಕಿ ನುಂಗಲು ಯತ್ನಿಸಿದ್ದಾನೆ.
ತಕ್ಷಣವೇ ಅಲರ್ಟ್ ಆದ ಪೊಲೀಸರು ಪಂಚರ ಸಮಕ್ಷಮದಲ್ಲಿ ಎಲ್ಲವನ್ನೂ ವಿಡಿಯೋ ಮಾಡಿ ಕೊಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ದು ಹಣ ವಾಪಸ್ ತೆಗೆಸಿದ್ದಾರೆ. ಅಧಿಕಾರಿಗೆ ಯಾವುದೇ ಪ್ರಾಣಪಾಯವಾಗಿಲ್ಲ. ಬಳಿಕ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ ವಶಕ್ಕೆ ಪಡೆದು ಕೊಂಡರು.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..