ಹುಬ್ಬಳ್ಳಿ –
ಅಧಿಕಾರಿಗಳ ಕಿರಿಕಿರಿ ಬಸ್ ಕಿರಿಕಿರಿ ಬೇಸತ್ತ ಚಿಗರಿ ಚಾಲಕರು – BRTS ನಲ್ಲಿ ಏನಾಗುತ್ತಿದೆ…..ನೊಡೊರಿಲ್ಲ ಕೇಳೊರಿಲ್ಲ ಇದ್ದೀರಾ DC ಯವರೇ……
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿ ರುವ ಚಿಗರಿ ಬಸ್ ಗಳ ಪರಸ್ಥಿತಿ ದೇವರೆ ಕಾಪಾಡಬೇಕು. ಆರಂಭಗೊಂಡು ಆರು ವರ್ಷ ಕಳೆದಿದ್ದು ಸಧ್ಯ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಈ ಒಂದು ಬಸ್ ಗಳ ವ್ಯವಸ್ಥೆ ಒಮ್ಮೆ ನೋಡಿದರೆ ಭಯವಾಗುತ್ತಿವೆ. ಸರಿಯಾದ ನಿರ್ವಹಣೆ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಬಸ್ ಗಳು ಸಧ್ಯ ಸಂಪೂರ್ಣವಾಗಿ ಹಾಳಾಗಿದ್ದು ಹಾಳಾದ ಹದಗೆಟ್ಟ ವ್ಯವಸ್ಥೆಯ ನಡುವೆಯೇ ಸಂಚಾರವನ್ನು ಮಾಡುತ್ತಿದ್ದು ಹಿರಿಯ ನುರಿತ ಅನುಭವಿ ಚಾಲಕರು ಇರುವ ಕಾರಣಕ್ಕಾಗಿಯೇ ಇದ್ದ ವ್ಯವಸ್ಥೆಯಲ್ಲಿಯೇ ಯಾವುದೇ ಸಮಸ್ಯೆ ಆಗದಂತೆ ಸರಿಯಾಗಿ ಚಾಲಕರು ನಿರ್ವಹಣೆ ಮಾಡುತ್ತಿದ್ದಾರೆ
ಹೀಗಿರುವಾಗ ಈ ಒಂದು ವ್ಯವಸ್ಥೆ ಒಂದು ಕಡೆಯಾದರೆ ಇನ್ನೂ ಬಸ್ ಗಳನ್ನು ಸರಿಯಾಗಿ ನಿರ್ವಹಣೆ ವ್ಯವಸ್ಥೆ ಮಾಡದ ಅಧಿಕಾರಿಗಳು ಇದನ್ನು ಬಿಟ್ಟು ಚಾಲಕರ ಮೇಲೆ ದರ್ಪವನ್ನು ತೋರಿಸುತ್ತಿದ್ದಾರೆ ವಿನಾಕಾರಣ ಮೆಮೊ ಕೊಡೊದು,ನೊಟೀಸ್ ಕೊಡೊದು,ಕಿಲೋ ಮೀಟರ್ ಕಡಿಮೆಯಾದರೆ ನೊಟೀಸ್ ನೀಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ.
ಒಂದು ಕಡೆಗೆ ಡೂಟಿ ಮಾಡಲು ಬಂದ ಚಾಲಕರಿಗೆ ಬಸ್ ಗಳ ಕಿರಿಕಿರಿ ಇನ್ನೊಂದೆಡೆ ಅಧಿಕಾರಿಗಳ ಟಾರ್ಚರ್ ಇವೆರಡರ ನಡುವೆ ಹಾಳಾದ ಬಸ್ ಗಳನ್ನು ನೋಡಿದ ಪ್ರಯಾಣಿಕರು ಕೂಡಾ ಚಾಲಕರಿಗೆ ನಿಮಗೆ ಚನ್ನಾಗಿ ಇರುವ ಬಸ್ ತರಲು ಆಗೋದಿಲ್ಲವೇ ಎಂದು ಬೈಯುತ್ತಿದ್ದಾರೆ ಹೀಗಾಗಿ ಇದೇಲ್ಲದರ ನಡುವೆ ನಮಗೆ ನೌಕರಿ ಸಾಕಾಗಿದೆ ನಮ್ಮನ್ನು ಬಿಟ್ಟು ಬಿಡಿ ಎಂದು ಚಾಲಕರು ಕೇಳಿಕೊಳ್ಳುತ್ತಿದ್ದಾರೆ ಇದ್ಯಾವುದು ಕೇಳಿ ಕೇಳಲಾರದಂತೆ ಬಸ್ ಗಳಲ್ಲಿ ಏನೇ ಸಮಸ್ಯೆ ಕಂಡು ಬಂದರು ಕಂಡು ಕಾಣದಂತೆ ಇರುವ ಡಿಸಿಯವರೇ ಇದೇಂಥಾ ವ್ಯವಸ್ಥೆ ಬೆಂಗಳೂರಿನಿಂದ ಬಂದಿರುವ ನಿಮಗೆ ಸರಿಯಾಗಿ ಸಂಸ್ಥೆಯನ್ನು ನಿರ್ವಹರಣೆ ಮಾಡಲು ಆಗಿದ್ದರೆ ಹೋಗಿ
ಸುಮ್ಮನೇ ಚಾಲಕರಿಗೆ ಇಷ್ಟೇಲ್ಲಾ ಕಿರಿಕಿರಿ ಆಗುತ್ತಿದ್ದರು ಸುಧಾರಣೆ ಮಾಡದ ನೀವು ಸದ್ಯ ಇರುವ ವ್ಯವಸ್ಥೆ ಯನ್ನು ಒಮ್ಮೆ ನೋಡಿ ಬಸ್ ಗಳ ವ್ಯವಸ್ಥೆ ಹೇಗಿದೆ ಚಾಲಕರು ಹೇಗೆ ಮಾತನಾಡುತ್ತಿದ್ದಾರೆ ತಿಳಿದುಕೊಂಡು ವ್ಯವಸ್ಥೆಯನ್ನು ಸುಧಾರಣೆ ಮಾಡಿ ಆ ಒಂದು ನಿರೀಕ್ಷೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..