ಶಹಾಪೂರ –
ನಿಯೋಜನೆ ಮೇಲೆ ಶಿಕ್ಷಕಿಯನ್ನು ಕಳುಹಿಸಿಕೊಟ್ಟ ಅಧಿಕಾರಿಗಳು – ಶಿಕ್ಷಕರ ಕೊರತೆಯ ನಡುವೆ ಶಿಕ್ಷಕಿಯನ್ನು ನಿಯೋಜನೆ ಮಾಡಿದ ಅಧಿಕಾರಿಗಳ ವಿರುದ್ದ ಆಕ್ರೋಶ ಹೌದು ಶಿಕ್ಷಕರ ಕೊರತೆಯ ನಡುವೆಯೂ ಕೂಡಾ ಶಿಕ್ಷಕಿಯೊಬ್ಬರನ್ನು ನಿಯೋಜನೆ ಮೇಲೆ ಕಳುಹಿಸಿಕೊಟ್ಟಿರುವ ಘಟನೆ ಶಹಾಪೂರದಲ್ಲಿ ನಡೆದಿದೆ.
ವಡಗೇರಾ ತಾಲ್ಲೂಕಿನ ತಡಿಬಿಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯ ನಡುವೆ ಶಾಲೆಯ ಸಹ ಶಿಕ್ಷಕಿ ಪಾರ್ವತಿ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನಿಯೋಜನೆ ಮೇಲೆ ಕಳುಹಿಸಲಾಗಿದೆ.ಈ ಒಂದು ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ಪೋಷಕರು ಆಗಮಿಸಿ ಪ್ರತಿಭಟನೆ ಮಾಡಲು ಮುಂದಾದರು
ಈ ಒಂದು ವಿಚಾರವನ್ನು ತಿಳಿದು ಸ್ಥಳಕ್ಕೆ ಆಗಮಿಸಿ ಮೂಲ ಹುದ್ದೆಯಲ್ಲಿಯೇ ಮುಂದುವ ರೆಸುವಂತೆ ಪತ್ರ ಬರೆಯಲಾಗುವುದು ಎಂದು ಬಿಇಒ ಶಿಬಾ ಜಲಿಯನ್ ತಿಳಿಸಿದ್ದಾರೆ.ಮೂರು ವರ್ಷದ ಹಿಂದೆ ಶಿಕ್ಷಕಿಯು ನಿಯೋಜನೆ ಮೇಲೆ ತೆರಳಿದ್ದಾರೆ.ಶಾಲೆಯಲ್ಲಿ 590 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕೇವಲ ನಾಲ್ಕು ಜನ ಶಿಕ್ಷಕರು ಇದ್ದಾರೆ.ಶಿಕ್ಷಕರ ಕೊರತೆ ನಡುವೆ ಶಿಕ್ಷಕಿ ಯನ್ನು ನಿಯೋಜನೆ ಮೇಲೆ ಕಳುಹಿಸಿದ ಕ್ರಮವು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಇಒ, ಸರ್ಕಾರದ ಆದೇಶ ಪಾಲನೆ ಮಾಡುವುದು ಅನಿವಾರ್ಯ ಎಂದು ಹೇಳಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಶಹಾಪೂರ…..