ಅಧಿಕೃತವಾಗಿ ಹೊರಬಿತ್ತು ಶಿಕ್ಷಣ ಸಚಿವರಿಂದ ಮಾಹಿತಿ ಶಿಕ್ಷಕರಿಗೆ ಸೇವಾ ಜೇಷ್ಠತೆಯ ಮೇಲೆ ಸಿಗಲಿದೆ ಪದೋನ್ನತಿ…..

Suddi Sante Desk

ಬೆಂಗಳೂರು –

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ 🌹🌹🌹🌹🌹🌹🌹🌹

ಇಂದು ನಡೆದ ರಾಜ್ಯ ಸಂಘದ ಪದಾಧಿಕಾರಿಗಳ ಜೊತೆಗಿನ ರಾಜ್ಯ ಮಟ್ಟದ ಕಲಿಕಾ ಚೇತರಿಕೆ ಕಾರ್ಯಾಗಾರದಲ್ಲಿ ರಾಜ್ಯ ಪದಾಧಿಕಾರಿಗಳು ನೀಡಿದ ಮಾಹಿತಿಯಂತೆ

1… Crp/Brp ಕೌನ್ಸಲಿಂಗ್ ಶೀಘ್ರದಲ್ಲಿಯೇ ನಡೆಯಲಿದೆ

2… ಹೆಚ್ಚುವರಿ ಪ್ರಕ್ರಿಯೆಯಲ್ಲಿ ಬಹುತೇಕ ಜಿಲ್ಲೆ ಹಾಗೂ ತಾಲೂಕುಗಳಲ್ಲಿಯೇ ಹೊಂದಾಣಿಕೆ ಆಗಲಿದೆ.ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚುವರಿಯಿಂದ ತೊಂದರೆ ಆಗುವ ಸಂಭವ ಕಡಿಮೆ ಇರಲಿದೆ

3… GPT ಹುದ್ದೆಗೆ ವರ್ಗಾವಣೆ ಹೊಂದಿರುವ PST ವಿಜ್ಞಾನ ಹಾಗೂ ಆಂಗ್ಲ ಶಿಕ್ಷಕರಿಗೆ ಮರಳಿ ಮೂಲ ಶಾಲೆಗೆ ಕಳುಹಿಸುವ ಆತಂಕ ಬೇಡ ಘನ ಸರಕಾರದ ವತಿಯಿಂದ ಇಲಾಖೆ ಘನ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡುವ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳುವ ಸ್ಪಷ್ಟ ಭರವಸೆ ನೀಡಿರುತ್ತಾರೆ.

4…ಆದಷ್ಟು ಬೇಗ PST ಶಿಕ್ಷಕರ ಹಿತ ಕಾಯುವ ನಿಟ್ಟಿನಲ್ಲಿ c and r ಬದಲಾವಣೆ ಆಗಲಿದೆ.ಈ ಸಂದರ್ಭದಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಸೆಲ್ವಕುಮಾರ ಸರ್ ಹಾಗೂ ಯೋಜನಾ ನಿರ್ದೇಶಕರಾದ ಶ್ರೀಮತಿ ಎಂ ದೀಪಾ ರವರೊಂದಿಗೆ ಬೆಳಗಾವಿ ಜಿಲ್ಲೆಯ ಒಂದಿಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಯಿತು‌ ಈ ಮೇಲಿನ ಅಂಶ ಗಳ ಬಗ್ಗೆ ಮಾಹಿತಿ ನೀಡಿದ ಮಾನ್ಯ ಶಿಕ್ಷಣ ಸಚಿವರು, ಇಲಾಖೆ ಹಿರಿಯ ಅಧಿಕಾರಿಗಳಿಗೆ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ಸಂಘಟನೆ ಬೆಳಗಾವಿ ವತಿ ಯಿಂದ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ…

ಮಾಹಿತಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.