ದಾವಣಗೆರೆ –
ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಕಳಪೆ ಅಕ್ಕಿ ನೀಡಲಾಗಿದೆ ಎನ್ನುವ ಆರೋಪವೊಂದು ದಾವಣಗೆರೆ ಯಲ್ಲಿ ಕೇಳಿ ಬಂದಿದೆ.ಹೌದು ಜಿಲ್ಲೆಯ ಜಗಳೂರು ತಾಲೂಕಿನ ಗೌಡ ಗುಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇಳಿ ಬಂದಿದೆ.ಈ ಶಾಲೆಯಲ್ಲಿ ಶಿಕ್ಷಣ ಇಲಾಖೆಯು ಬಿಸಿಯೂಟದ ಬದಲು ಮಕ್ಕಳಿಗೆ ಅಕ್ಕಿ ವಿತರಿಸಿತ್ತು.ಅಕ್ಕಿ ಪಡೆದ ಮಕ್ಕಳು ಮನೆಗೆ ತಗೆದು ಕೊಂಡು ಹೋಗಿದ್ದಾರೆ.ಮನೆಯಲ್ಲಿ ಅಕ್ಕಿಯನ್ನು ಬೇಯಿ ಸಿದಾಗ ಅನ್ನ ರಬ್ಬರ್ ನಂತೆ ಆಗಿದೆ.ಇನ್ನೂ ಈ ಒಂದು ವಿಚಾರ ತಿಳಿದ ಗ್ರಾಮಸ್ಥರು ಜಗಳೂರು ತಹಶೀಲ್ದಾರ್ ಸಂತೋಷ ಅವರ ಬಳಿ ತೆರಳಿ ಇಲಾಖೆ ವಿರುದ್ಧ ದೂರಿದ್ದಾರೆ

ಇನ್ನೂ ತಹಶೀಲ್ದಾರ್ ಕೂಡಲೇ ಎಚ್ಚೆತ್ತುಕೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು. ಅಧಿಕಾರಿ ಗಳ ತಂಡ ಶಾಲೆಗೆ ತೆರಳಿ ಪರೀಶಿಲನೆ ನಡೆಸಿದ್ದಾರೆ.