ಔರಾದ್ (ಬೀದರ್ ಜಿಲ್ಲೆ) –
ಧಾರಾಕಾರ ಮಳೆಗೆ ತಾಲ್ಲೂಕಿನ ಕರಂಜಿ (ಬಿ) ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಭಾರಿ ಅನಾಹುತ ತಪ್ಪಿದೆ.
ಕಳೆದ ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿರುವು ದರಿಂದ ಮಣ್ಣಿನ ಮನೆ ಹಾಗೂ ಹಳೆ ಕಟ್ಟಡಗಳಿಗೆ ಅಪಾಯ ಎದುರಾಗಿದೆ.ಧವಾರ ಶಾಲೆ ಬಿಟ್ಟ ನಂತರ ಏಕಾಏಕಿ ಶಾಲೆ ಕಟ್ಟಡ ಕುಸಿದಿದೆ.ಇದರಿಂದಾಗಿ ಕೆಲವೇ ಗಂಟೆಗಳ ನಂತರದಲ್ಲಿ ಭಾರಿ ಅವಘಡ ತಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕರಂಜಿ ಶಾಲೆ ಕಟ್ಟಡ ಕುಸಿದ ಮಾಹಿತ ಪಡೆಯಲಾಗಿದೆ. ಅಂತಹ ಅಪಾಯ ಇರುವ ಮಟ್ಟದಲ್ಲಿ ಮಕ್ಕಳನ್ನು ಕೂಡಿಸ ಬಾರದು ಎಂದು ಎಲ್ಲ ಶಾಲೆ ಮುಖ್ಯ ಶಿಕ್ಷಕರಿಗೆ ಲಿಖಿತ ಆದೇಶ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಾಗನೂರ ತಿಳಿಸಿದ್ದಾರೆ.