BEO ಕಚೇರಿ ಮುಂದೆ ಪ್ರತಿಭಟನೆ ಕುಳಿತ ಶಿಕ್ಷಕ – ಶಿಕ್ಷಕರ ಸಮಸ್ಯೆ ಆಲಿಸದ ಅಧಿಕಾರಿಗಳು…..

Suddi Sante Desk
BEO ಕಚೇರಿ ಮುಂದೆ ಪ್ರತಿಭಟನೆ ಕುಳಿತ ಶಿಕ್ಷಕ – ಶಿಕ್ಷಕರ ಸಮಸ್ಯೆ ಆಲಿಸದ ಅಧಿಕಾರಿಗಳು…..

ಅಫಜಲಪುರ

ಶಿಕ್ಷಕರೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಅಫಜಲಪುರ ದಲ್ಲಿ ನಡೆದಿದೆ.ಫೆಬ್ರುವರಿ ತಿಂಗಳ ಶಿಕ್ಷಕರ ಸಂಬಳ ಮಾಡಲು ಸರ್ಕಾರ ಎರಡು ಬಾರಿ ಅವಕಾಶ ನೀಡಿದರೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿಯು ಬೇಜವಾಬ್ದಾ ರಿಯಿಂದ ಖಜಾನೆಗೆ ದಾಖಲೆಗಳನ್ನು ನೀಡದ ಕಾರಣ ನಮಗೆ ಸಂಬಳವಾಗಲಿಲ್ಲ ಎಂದು ಸರ್ವ ಶಿಕ್ಷಣ ಅಭಿಯಾನದ ಶಿಕ್ಷಕ ಜಗದೀಶ್ ಅವಟೆ ಕ್ಷೇತ್ರ ಶಿಕ್ಷಣಾ  ಧಿಕಾರಿ ಕಚೇರಿ ಧರಣಿ ನಡೆಸಿದರು.

ತಾಲ್ಲೂಕಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ  ಯಲ್ಲಿ 180 ಶಿಕ್ಷಕರು ಕೆಲಸ ಮಾಡುತ್ತೇವೆ. ಕಳೆದ ಫೆಬ್ರುವರಿ ತಿಂಗಳ ಸಂಬಳ ಆಗಬೇಕಾದರೆ ಮಾರ್ಚ್ 15ರ ಒಳಗಾಗಿ ಸಂಬಂಧಪಟ್ಟ ದಾಖಲೆಗಳನ್ನು ಖಜಾನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ನೀಡಬೇಕಾಗಿತ್ತು. ದಾಖಲೆ ನೀಡದ ಕಾರಣ ನಮ್ಮ ಸಂಬಳವಾಗಿಲ್ಲ. ಹೀಗಾಗಿ ನಮಗೆ ತೊಂದರೆಯಾಗು ತ್ತಿದೆ ಸರ್ಕಾರದ ನಿಯಮದ ಪ್ರಕಾರ ಫೆಬ್ರುವರಿ ತಿಂಗಳ ಸಂಬಳವಾಗದಿದ್ದರೆ ಮುಂದೆ ಒಂದು ವರ್ಷದವರೆಗೆ ಸಂಬಳ ಮಾಡಲು ಬರುವುದಿಲ್ಲ. ಮತ್ತೆ ನಾವು ಮುಂದಿನ ವರ್ಷ ಸಂಬಳ ಮಾಡಿಕೊಳ್ಳಬೇಕು’ ಎಂದು ಅಳಲು ತೋಡಿಕೊಂಡರು.

‘ಇಂತಹ ಬೇಜವಾಬ್ದಾರಿ ಸಿಬ್ಬಂದಿ ವಿರುದ್ಧ ಮೇಲಾಧಿಕಾ ರಿಗಳು ಕ್ರಮ ಜರುಗಿಸಬೇಕು. ಇವರನ್ನು ಎತ್ತಂಗಡಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟವನ್ನು ಮಾಡಬೇಕಾಗುತ್ತದೆ’ ಎಂದರು.

ಈ ಬಗ್ಗೆ ಪ್ರತಿಕ್ರಯಿಸಿದ ಬಿಇಒ ಯುವರಾಜ್ ಬಿ. ಗಾಡಿ, ‘ನಾನು ಹೊಸದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಶಿಕ್ಷಕರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳುತ್ತೇನೆ. ಫೆಬ್ರುವರಿ ತಿಂಗಳ ಸಂಬಳ ಯಾವ ಕಾರಣಕ್ಕಾಗಿ ವಿಳಂಬವಾಗಿದೆ. ಇದಕ್ಕೆ ಯಾರು ಹೊಣೆಗಾರರು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಸುದ್ದಿ ಸಂತೆ ನ್ಯೂಸ್ ಅಫಜಲಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.