ಹಿಮಾಚಲ ಪ್ರದೇಶ –
ಹಳೆಯ ಪಿಂಚಣಿ ಯೋಜನೆಯನ್ನು ದೇಶದ ಒಂದೊಂದು ರಾಜ್ಯಗಳು ಜಾರಿಗೆ ಮಾಡುತ್ತಿವೆ. ಹೌದು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾ ಗಿದ್ದು ಸಧ್ಯ ಹಿಮಾಚಲ ಪ್ರದೇಶ ಕೂಡಾ ಈ ಒಂದು ಪಟ್ಟಿಗೆ ಸೇರಿಕೊಂಡಿದೆ.ಹಿಮಾಚಲ ಪ್ರದೇಶವು 1.36 ಲಕ್ಷ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಿದೆ.
ಹೊಸ ಪಿಂಚಣಿ ಯೋಜನೆ ಬದಲಿಗೆ ಹಳೆಯ ಪೆನ್ಷನ್ ಸ್ಕೀಮ್ ಅನ್ನು ಆಯ್ಕೆ ಮಾಡಿದ ರಾಜ್ಯ ಗಳ ಸಾಲಿಗೆ ಈಗ ಹಿಮಾಚಲ ಪ್ರದೇಶ ಸೇರಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಒಂದು ವಿಚಾರವನ್ನು ಪ್ರಸ್ತಾಪಿಸಿ ಒಪ್ಪಿಗೆಯನ್ನು ನೀಡಲಾಯಿತು.ಉದ್ಯೋಗಿಗಳು OPS ಮತ್ತು NPS ನಡುವೆ ಆಯ್ಕೆ ಮಾಡುವ ಸೌಲಭ್ಯವನ್ನು ಹೊಂದಿರುತ್ತಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಸ್ಥಾಪಿಸುವುದಾಗಿ ಭರವಸೆ ನೀಡಿತ್ತು.ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಂಜಾಬ್‌ಗಳು ತಮ್ಮ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ತಂದಿರುವ ಇತರ ರಾಜ್ಯಗಳಾ ಗಿದ್ದು ಸದ್ಯ ಕರ್ನಾಟಕದಲ್ಲಿ ಎನ್ ಪಿ ಎಸ್ ವಿರೋಧಿಸಿ ಸರ್ಕಾರಿ ನೌಕರರು ಹಲವು ದಿನಗ ಳಿಂದ ಧ್ವನಿ ಕೇಳಿ ಬರುತ್ತಿದ್ದು ಸಧ್ಯ ನಮ್ಮ ರಾಜ್ಯ ದಲ್ಲಿ ಈ ಒಂದು ಯೋಜನೆ ಏನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಹಿಮಾಚಲ ಪ್ರದೇಶ…..