ಜನವರಿ 3 ರಂದು 15 ರಿಂದ 18 ವರ್ಷ ಮಕ್ಕಳಿಗೆ ಲಸಿಕಾಕರಣ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಚಾಲನೆ….

Suddi Sante Desk

ಬೆಂಗಳೂರು –

ರಾಜ್ಯದಲ್ಲಿ 15 ರಿಂದ 18 ವರ್ಷದವರಿಗಾಗಿ ಲಸಿಕೆ ನೀಡಲಾಗುತ್ತಿದ್ದು ಭಾರತ ಸರ್ಕಾರದ ನಿರ್ದೇಶನದಂತೆ ಜನವರಿ 3, 2022 ರಂದು ರಾಜ್ಯದಲ್ಲಿ ಆರಂಭವಾಗಲಿದ್ದು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸೂಚನೆ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದು ರಾಜ್ಯದಲ್ಲಿ ಜನವರಿ 16, 2021ರಿಂದ ಕೋವಿಡ್ 19 ಲಸಿಕಾಕರಣವನ್ನು ವಿವಿಧ ಗುಂಪಿನ ಫಲಾನುಭವಿ ಗಳಿಗೆ ವಿವಿಧ ಹಂತಗಳಲ್ಲಿ ನಡೆಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದ್ದಾರೆ

ಸಧ್ಯ ರಾಜ್ಯದಲ್ಲಿ 8.5 ಕೋಟಿಗಿಂತ ಹೆಚ್ಚು ಲಸಿಕಾ ಡೋಸ್ ನೀಡಲಾಗಿದ್ದು ಈವರೆಗೆ ಶೇ.97ರಷ್ಟು ಜನರಿಗೆ ಮೊದಲನೇ ಡೋಸ್ ಹಾಗೂ ಶೇ.77ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದರ ನಡುವೆ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಓಮಿಕ್ರಾನ್ ವೈರಸ್ ಪ್ರಕರಣ ಗಳು ಹೆಚ್ಚುತ್ತಿವೆ.ಭಾರತ ಸರ್ಕಾರದ ನಿರ್ದೇಶನದನ್ವಯ ಜನವರಿ 3, 2022ರಿಂದ ರಾಜ್ಯದ ಎಲ್ಲಾ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾರಣ ನಡೆಸಲು ಸೂಚನೆ ನೀಡಲಾಗಿದೆ

ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಕಾರ್ಯ ಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಕಾರ್ಯ ನಿರ್ವಹಿಸು ವಂತೆ ದಿನಾಂಕ 3-01-2022ರಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಹಾಗೂ ವಿಧಾನಸಭಾ ಸದಸ್ಯರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕ ಳಿಗೆ ಲಸಿಕಾರರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಕೋರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.