ಆಕಾಶವಾಣಿಯಲ್ಲಿ ನವೆಂಬರ್ 18 ರಂದು ಸಮಗ್ರ ಶಿಕ್ಷಣ ಸಂಚಲನ ಕಾರ್ಯಕ್ರಮ ಪ್ರಸಾರ -ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಭಾಗಿ

Suddi Sante Desk
ಆಕಾಶವಾಣಿಯಲ್ಲಿ ನವೆಂಬರ್ 18 ರಂದು ಸಮಗ್ರ ಶಿಕ್ಷಣ ಸಂಚಲನ ಕಾರ್ಯಕ್ರಮ ಪ್ರಸಾರ -ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಭಾಗಿ

ಧಾರವಾಡ

ರಾಜ್ಯದ ಎಲ್ಲಾ 13 ಆಕಾಶವಾಣಿ ಕೇಂದ್ರಗಳಿಂದ ನಾಳೆ ಬೆಳಗ್ಗೆ  7ಗಂಟೆ 15 ನಿಮಿಷಕ್ಕೆ ಏಕಕಾಲಕ್ಕೆ ಪ್ರಸಾರವಾಗುವ ಸಮಗ್ರ ಶಿಕ್ಷಣ ಸಂಚಲನ ಸರಣಿ ಕಾರ್ಯಕ್ರಮದಲ್ಲಿ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಅವರೊಂದಿಗೆ ಶಿಕ್ಷಣ ಇಲಾಖೆಯಲ್ಲಿ ರುವ ಆನ್ ಲೈನ್ ಸೇವೆಗಳು ಎಂಬ ವಿಷಯ ಕುರಿತ ಸಂವಾದ ಪ್ರಸಾರವಾಗಲಿದೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ)ಪ್ರಾಯೋಜಕತ್ವದಲ್ಲಿ ರೂಪಿಸಿರುವ ಈ ಕಾರ್ಯಕ್ರಮವು ನ.19 ರಂದು ಬೆಳಿಗ್ಗೆ 9ಕ್ಕೆ ಬೆಂಗಳೂರಿನ ೧೦೧.೩ ಎಫ್.ಎಂ. ರೇನ್‌ಬೋ ವಾಹಿನಿಯಲ್ಲಿಯೂ ಪ್ರಸಾರವಾಗ ಲಿದ್ದು  ಆಲ್ ಇಂಡಿಯಾ ರೇಡಿಯೋ ಬೆಂಗಳೂರು ಯುಟ್ಯೂಬ್‌ದಲ್ಲಿಯೂ ಇದನ್ನು ಆಲಿಸಬಹುದು. ಜೊತೆಗೆ ನ್ಯೂಸ್ ಆನ್ ಎ.ಐ.ಆರ್ಆ್ಯಪ್ ಡೌನ್ ಲೋಡ್ ಮಾಡುವ ಮೂಲಕ ನೇರವಾಗಿ ಮೊಬೈಲ್ ಮೂಲಕವೂ ಈ ಆಕಾಶವಾಣಿ ಸಂವಾದ ಕಾರ್ಯಕ್ರಮ ಆಲಿಸಬ ಹುದಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು ಸೇರಿದಂತೆ  ಎಲ್ಲ ಭಾಗಿದಾರರು ಈ ಮಹತ್ವದ ಕಾರ್ಯಕ್ರಮವನ್ನು ಆಲಿಸುವಂತೆ ಸೂಚಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.